ಲೇಖಕ ಡಾ. ನಾ. ಮೊಗಸಾಲೆ ಅವರ ಆತ್ಮವೃತ್ತಾಂತ ಕೃತಿ ʻಬಯಲ ಬೆಟ್ಟʼ. ಪುಸ್ತಕದಲ್ಲಿ ಲೇಖಕರು ತಮ್ಮ ಬದುಕಿನ ಕಹಿ-ಸಿಹಿ, ಕಷ್ಟ-ಸುಖ, ವೃತ್ತಿ ಮತ್ತು ಸಾಹಿತ್ಯ ಬದುಕಿನ ವಿವಿಧ ಆಯಾಮಗಳನ್ನು ಅವರದೇ ಆದ ವೈಶಿಷ್ಟ್ಯಮಯ ಶೈಲಿಯಲ್ಲಿ ತೆರೆದಿಟ್ಟಿದ್ದಾರೆ. ಅವಿಭಕ್ತ ಕುಟುಂಬದ ಆರ್ಥಿಕ ಸಂಕಷ್ಟಗಳು, ಓದಿಗಾಗಿ ಪಟ್ಟ ಶ್ರಮ, ಉಡುಪಿಯ ಮಠಗಳ ಪರಿಸರ, ಕಾಂತಾವರದಲ್ಲಿ ನೆಲೆ ನಿಂತಾಗಿನ ಪರಿಸ್ಥಿತಿ, ಅಲ್ಪ ಸ್ವಲ್ಪ ರಾಜಕೀಯ, ಕಾಂತಾವರ ಕನ್ನಡ ಸಂಘದ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿ, ಮೂಡುಬಿದರೆಯ ವರ್ಧಮಾನ ಪ್ರಶಸ್ತಿ ಹೀಗೆ ತಮಗೆ ಸಂದಿದ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು.. ಹೀಗೆ ಮೊಗಸಾಲೆಯವರ ಬದುಕಿನ ಹಲವಾರು ನೆನಪು, ಸಂಗತಿಗಳನ್ನು ಇಲ್ಲಿ ಕಾಣಬಹುದು. ಹೀಗೆ, ಕನ್ನಡ ಸಾರಸ್ವತ ಲೋಕ ಸದಾ ಕಾಲ ನೆನಪಿಟ್ಟುಕೊಳ್ಳುವಂತೆ ದುಡಿದ ಸಾಹಿತ್ಯ ಲೋಕದ ದಿಗ್ಗಜರೆಂದು ಗುರುತಿಸಿಕೊಂಡ ವ್ಯಕ್ತಿಯ ಬದುಕಿನ ರೋಚಕ ಪಯಣದ ಏಳು ಬೀಳುಗಳನ್ನು ವರ್ಣಿಸುವ ಈ ಕೃತಿಯು ಹಲವು ರೀತಿಯಲ್ಲಿ ಎಂತಹವರಿಗೂ ಮಾದರಿಯಾಗಬಲ್ಲದು.
ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...
READ MORE