‘ಬಾಬಾ ಸಾಹೇಬರೆಡೆಗೆ’ ಹೈದರಾಬಾದ್ ಕರ್ನಾಟಕದ ಧೀಮಂತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಜೀವನ ಸಾಧನೆಗಳ ದರ್ಶನ ಗ್ರಂಥ. ಈ ಕೃತಿಯನ್ನು ಲೇಖಕ ಎಚ್.ಟಿ. ಪೋತೆ ಅವರು ರಚಿಸಿದ್ದಾರೆ.
ಸ್ವಾತಂತ್ರ್ಯೋತ್ತರ ಕರ್ನಾಟಕದ ಪ್ರಮುಖ ನಾಯಕರಾಗಿ ಅವರು ಮಾಡಿದ ಸಾಧನೆ, ಪಡೆದ ಸಿದ್ದಿ ಎಂದಿಗೂ ಅನೂಹ್ಯ, ಕರ್ನಾಟಕದ ಸಮಸ್ತ ಜನವರ್ಗದವರ ಪ್ರೀತಿ, ಅಭಿಮಾನ-ಗೌರವಗಳಿಗೆ ಖರ್ಗೆಯವರು ಪಾತ್ರರಾದದ್ದು ಕಡಿಮೆ ಸಾಧನೆಯೇನೂ ಅಲ್ಲ. ಕರ್ನಾಟಕ ಸರ್ಕಾರದ ಗೃಹಮಂತ್ರಿಯಾಗಿ, ಶಿಕ್ಷಣ ಮಂತ್ರಿಯಾಗಿ ಮತ್ತಿತರ ಇಲಾಖೆಗಳನ್ನು ನಿಸ್ಪೃಹತೆಯಿಂದ ನಿರ್ವಹಿಸಿದ ರೀತಿ ಬೆರಗುಗೊಳಿಸುವಂಥದು. ಹಲವು ಜನಮುಖಿ ಕಾರ್ಯಗಳನ್ನೂ ಯೋಜನೆಗಳನ್ನೂ ಕರ್ನಾಟಕದಲ್ಲಿ ಜಾರಿಗೆ ತಂದ ಕೀರ್ತಿ ಖರ್ಗೆಯವರಿಗೆ ಸೇರುತ್ತದೆ. ರಾಜಕಾರಣದಲ್ಲಿ ರಾಜ್ಯದಿಂದ ರಾಷ್ಟ್ರರಾಜಧಾನಿಯತ್ತ ದಾಪುಗಾಲು ಹಾಕಿ ನಡೆದ ಬಗೆ ಅಪೂರ್ವ. ಖರ್ಗೆ ಅವರ ಸಾಂಸ್ಕತಿಕ, ಸಾಮಾಜಿಕ, ಶೈಕ್ಷಣಿಕ, ರಾಷ್ಟಿಕ ಹಾಗೂ ಧಮ್ಮದ ಮುಖಗಳನ್ನು ಅನಾವರಣಗೊಳಿಸಿದ್ದಾರೆ.
ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...
READ MORE