'ಬಾಬಾ ಆಮ್ಟೆ', ಲೇಖಕ ಕಾಶೀನಾಥ ಅಂಬಲಗೆ ಅವರು ಮಕ್ಕಳಿಗಾಗಿ ಬರೆದ ಕಿರು ಪುಸ್ತಕ. ಮಕ್ಕಳ ಬಾಲ್ಯವನ್ನು ಅರ್ಥಪೂರ್ಣವಾಗಿ ರೂಪಿಸುವಲ್ಲಿ ಪುಸ್ತಕಗಳ ಪಾತ್ರವೂ ಅತ್ಯಗತ್ಯ. ಆ ಕಾರಣದಿಂದಲೇ ಕಾಶೀನಾಥ ಅಂಬಲಗೆ ಅವರು ಹಲವು ಮಹಾತ್ಮರ ಕುರಿತಾದ ಕಿರುಹೊತ್ತಿಗೆಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಮಹಾ ಸಮಾಜ ಸೇವಕರಾದ ಬಾಬಾ ಆಮ್ಟೆ ಅವರ ಕುರಿತಾದ ಈ ಕೃತಿಯೂ ಒಂದು. ಈ ಕೃತಿಯಲ್ಲಿ ಬಾಬಾ ಆಮ್ಟೆ ಅವರ ಸಮಾಜಸೇವೆಯ ವಿವಿಧ ಆಯಾಮಗಳು ಮತ್ತು ಅವರ ಬದುಕಿನ ಕುತೂಹಲಕರ ಘಟನೆಗಳ ಕುರಿತಾದ ಸರಳ ವಿವರಣೆಗಳಿವೆ.
ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ. ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...
READ MORE