`ಬಿ.ಎಂ.ಶ್ರೀಕಂಠಯ್ಯ' ಜೀವನಚರಿತ್ರೆಯ ಪುಸ್ತಕವಿದು. ಲೇಖಕ ಎಸ್. ಚನ್ನಪ್ಪ ರಚಿಸಿದ್ದಾರೆ. ಕನ್ನಡದ ಕಣ್ವ ಎನಿಸಿದ ಬಿ.ಎಂ. ಶ್ರೀಕಂಠಯ್ಯನವರು ಅಸಾಧಾರಣ ವಿದ್ವಾಂಸರು, ಅತ್ಯುತ್ತಮ ಗುರುಗಳು, ಶ್ರೇಷ್ಠ ವಾಗ್ಮಿಗಳು, ಪ್ರತಿಭಾವಂತ ಕವಿ – ನಾಟಕಕಾರರು. ಕನ್ನಡಕ್ಕೆ ಕನ್ನಡ ನಾಡಿನಲ್ಲೇ ಸ್ಥಾನವಿಲ್ಲದಿದ್ದ ಕಾಲದಲ್ಲಿ ಕನ್ನಡ ನಾಡಿಗೆ ಕನ್ನಡವೇ ಗತಿ ಎಂದು ಸಾರಿದರು, ಸಿರಿಗನ್ನಡಂ ಗೆಲ್ಗೆ! ಎಂಬ ಮಂತ್ರವನ್ನು ಕಲಿಸಿದರು. ಹೊಸ ಶಕ್ತಿಯ ಸಂಚಾರವಾಗಲು ಕಾರಣರಾದರು. ಪ್ರತಿಭಾವಂತ ಬರಹಗಾರರನ್ನು ಬೆಳಕಿಗೆ ತಂದರು. ಆಚಾರ್ಯ ಶ್ರೀ ಅವರು ‘ಕನ್ನಡದ ರಕ್ಷಾಮಣಿ’ ಎಂದು ಬಿ.ಎಂ.ಶ್ರೀಕಂಠಯ್ಯ ಅವರ ಕುರಿತು ವಿವರಿಸಲಾಗಿದೆ.
ಪ್ರೊ.ಎಸ್. ಚನ್ನಪ್ಪ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಕೃತಿಗಳು: ಬೇಂದ್ರೆ ಸ್ಮರಣೆ, ಎಂ.ಎಸ್.ಪುಟ್ಟಣ್ಣ, ಬಿ.ಎಂ. ಶ್ರೀಕಂಠಯ್ಯ (ಜೀವನ ಚಿತ್ರಗಳು) ...
READ MORE