ಕಷ್ಟದಲ್ಲಿರುವವರಿಗೆ, ಆಶ್ರಯವಿಲ್ಲದೇ ಅನಾಥರಾಗಿರುವ, ರೋಗಗಳಿಂದ ನರಳುತ್ತಿರುವ ಹೆಣ್ಣು-ಗಂಡು ಎನ್ನದೇ ಎಲ್ಲರನ್ನು ಕರೆತಂದು ಆಶ್ರಮದಲ್ಲಿ ಇರಿಸಿಕೊಂಡು ಸೇವೆ ಮಾಡುತ್ತಿರುವವರು ಆಟೋರಾಜ. ಅವರ ಜೀವನ ಕುರಿತು ವಿವರಿಸುವ ಕೃತಿ ಇದಾಗಿದೆ. ಲೇಖಕರಾದ ವಿನೋದ್ ಅವರು ಆಟೋರಾಜ ಅವರು ನಡೆಸುತ್ತಿರುವ ಆಶ್ರಮದಲ್ಲಿ ಕೆಲಕಾಲ ವಾಸವಿದ್ದು, ಅವರ ಸೇವೆ, ಪ್ರಾಮಾಣಿಕತೆ, ನಿಸ್ವಾರ್ಥ ಸೇವೆಯನ್ನು ಕಣ್ಣಾರೆ ಕಂಡಿದ್ದಾರೆ. ಜಾತಿ ಮತಗಳಿಗಿಂತಲೂ ಮಾನವೀಯ ಧರ್ಮ ದೊಡ್ಡದು ಎನ್ನುವ ಆಟೋರಾಜರ ಬದುಕಿನ ಇಣುಕುನೋಟ ಈ ಕೃತಿಯಲ್ಲಿದೆ.
ವಿನೋದ್ ಕುಮಾರ್.ಬಿ. ಅವರು ಹೃದಯವಂತ ವಿಷ್ಣು ಎಂಬ ಕೃತಿಯನ್ನು ರಚಿಸಿದ್ದಾರೆ. ವಿನೋದ್ ಕುಮಾರ್ ಬಿ ಅವರು ಜನಿಸಿದ್ದು 1989 ಫೆಬ್ರುವರಿ 14 ರಂದು ಜನಿಸಿದರು. ಬೆಂಗಳೂರಿನವರೇ ಆದ ವಿನೋದ್ ಅವರು ಪ್ರಸ್ತುತ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಸೀನಿಯರ್ ಅಸೋಸಿಯೇಟ್ ಅಡ್ಮಿನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಹೃದಯವಂತ ವಿಷ್ಣು ಅವಧೂತರು, ಭಾವ ಶಿಲ್ಪಿ ಡಾ.ವಿಷ್ಣುವರ್ಧನ್ ಆಟೋ ರಾಜ ಮುಂತಾದವು. ಇವರಿಗೆ ಶಾರದಾ ಸುಪುತ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ...
READ MORE