`ಅಶ್ಫಾಕ್ ಉಲ್ಲಾ' ಎಂಬುದು ಜೀವನಚರಿತ್ರೆಯ ಪುಸ್ತಕ. ಲೇಖಕ ಎನ್.ಪಿ. ಶಂಕರ ನಾರಾಯಣರಾವ್ ರಚಿಸಿದ್ದಾರೆ. ದೇಶ ಸ್ವಾತಂತ್ರ್ಯಕ್ಕಾಗಿ ನೇಣು ಹಗ್ಗವನ್ನೇ ಕೊರಳ ಹಾರವಾಗಿ ಧರಿಸಿದ, ಕ್ರಾಂತಿಕಾರರ ಅಗ್ರಪಂಕ್ತಿಗೆ ಸೇರಿದ ಮುಸ್ಲಿಂ ತರುಣವೀರ. ಖುರಾನ್ ನನ್ನು ಪಠಿಸುತ್ತಾ ದೇಶಕ್ಕಾಗಿ ಮೃತ್ಯುವನ್ನಾಲಂಗಿಸಿದ ಅಪ್ರತಿಮ ದೇಶಭಕ್ತ ಎಂದು ಅಶ್ಫಾಕ್ ಉಲ್ಲಾ ಅವರ ಕುರಿತು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಅಶ್ಫಾಕ್ ಉಲ್ಲಾ ಅವರ ಬಾಲ್ಯ ಜೀವನ, ಬದುಕಿನ ಮುಖ್ಯ ತಿರುವು, ಸ್ವಾತಂತ್ರ್ಯ ಹೋರಾಟದ ದಿನಗಳು, ಕ್ರಾಂತಿಕಾರಿ ಬದುಕು, ಬ್ರಿಟಿಷರ ವಿರುದ್ದ ಹೋರಾಡಿದ ಪರಿ, ಜನಸಾಮಾನ್ಯರೊಂದಿಗಿನ ಸಂಬಂಧ, ನೇಣುಗಂಬವೇರಿದ ಹಿಂದಿನ ಇತಿಹಾಸ ಹೀಗೆ ಅಶ್ಫಾಕ್ ಉಲ್ಲಾ ಅವರ ಬದುಕಿನ ಮುಖ್ಯ ಘಟ್ಟಗಳನ್ನು ಲೇಖಕರು ಸರಳ ಕನ್ನಡದಲ್ಲಿ ವಿವರಿಸಿದ್ದಾರೆ.
.ಎನ್.ಪಿ. ಶಂಕರ ನಾರಾಯಣ ರಾವ್ ಅವರು 1928ರ ಆಗಸ್ಟ್ 03ರಂದು ಹಾಸನ ಜಿಲ್ಲೆಯ ನಿಟ್ಟೂರು ಗ್ರಾಮದವರು. ತಂದೆ ಪಟ್ಟಾಭಿರಾಮಯ್ಯ ಹಾಗೂ ತಾಯಿ ಅಚ್ಚಮ್ಮ. ತಂದೆ ಸಬ್ ರಿಜಿಸ್ಟ್ರಾರ್ ಇದ್ದರು. ವರ್ಗಾವಣೆ ಆದ ಕಡೆ ಇವರ ವಿದ್ಯಾಭ್ಯಾಸ ಅನಿವಾರ್ಯವಾಯಿತು. ಬೆಂಗಳೂರಿನ ಶ್ರೀರಾಮಪುರದಲ್ಲಿ ಪ್ರಾಥಮಿಕ ಶಿಕ್ಷಂ, ಕನಕಪುರದ ಕಾನಕಾನಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆನೇಕಲ್ ಹಾಗೂ ಬಸವನಹಳ್ಳಿಯಲ್ಲಿ ಮಾಧ್ಯಮಿಕ ಹಾಗೂ ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಆ ಕಾಲದಲ್ಲಿ ಸ್ವಾತಂತ್ಯ್ರ ಚಳವಳಿ ಆರಂಭವಾಗಿ, ಜೈಲುವಾಸ ಅನುಭವಿಸಿದರು. ಮೈಸೂರು ಸ್ಟೂಡೆಂಟ್ಸ್ ಯೂನಿಯನ್ ಸ್ಥಾಪಿಸಿ ಎಡ ಪಂಥೀಯ ವಿಚಾರಗಳೊಂದಿಗೆ ಹೋರಾಟ ನಡೆಸಿದರು. ಮೈಸೂರು ಪುರಸಭಾ ಕಾರ್ಮಿಕ ಸಂಘದ ...
READ MORE