‘ಅಸಮಾನ ಜೆ.ಎನ್. ಟಾಟಾ’ ಲೇಖಕ ಮ.ಸು. ಮನ್ನಾರ್ ಕೃಷ್ಣರಾವ್ ರಚಿಸಿರುವ ಕೃತಿ. ಜೆ.ಎನ್. ಟಾಟಾ ಅವರು ಹಾಕಿಕೊಟ್ಟ ಸುಭದ್ರ ಕೈಗಾರಿಕಾ ತಳಪಾಯದ ಆಧಾರದಲ್ಲಿ ಸ್ವತಂತ್ರ ಭಾರತದ ಸರ್ಕಾರವು ಜವಾಹರ ಲಾಲ್ ನೆಹರು ನೇತೃತ್ವದಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ಬೃಹತ್ ಕೈಗಾರಿಕೆಗಳನ್ನು ಪ್ರಾರಂಭಿಸಿ ಕೋಟ್ಯಂತರ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳನ್ನು ನೀಡಿ, ಅಷ್ಟರ ಮಟ್ಟಿಗೆ ಬಡತನವನ್ನು ನೀಗಲು ಕಾರಣವಾದುದು ಈಗ ಇತಿಹಾಸ.
ಅಂತಹ ಜೆ.ಎನ್. ಟಾಟಾ ಅವರ ಬಾಲ್ಯ, ವಿದ್ಯಾಭ್ಯಾಸ, ವಿದೇಶಿ ಪ್ರವಾಸ, ಹತ್ತಿ ಗಿರಣಿಗಳ ಸ್ಥಾಪನೆ, ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆಯ ಸ್ಥಾಪನೆ, ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪನೆ, ಜಲ ವಿದ್ಯುತ್ ಯೋಜನೆ, ಕಾಫಿ ಬೆಳೆಯುವ ಪ್ರಯತ್ನ, ರೇಷ್ಮೆ ಕೈಗಾರಿಕೆ, ಅವರ ಕೌಟುಂಬಿಕ ಜೀವನ ಮುಂತಾದ ವಿವರಗಳನ್ನು ಮನ ಮುಟ್ಟುವಂತೆ ಲೇಖಕರು ಚಿತ್ರಿಸಿದ್ದಾರೆ.
ಮ.ಸು. ಮನ್ನಾರ್ ಕೃಷ್ಣರಾವ್ ಮಂಡ್ಯ ನಗರದ ಮೈಷುಗರ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈವರೆಗೆ 12 ಕವನ ಸಂಕಲನಗಳು, 8 ಸತ್ಯ ಘಟನೆಗಳ ಗದ್ಯ ಕೃತಿಗಳು ಮತ್ತು ಅದ್ವಿತೀಯ ಭಾರತೀಯ ಜಿ.ಡಿ. ಬಿರ್ಲಾ ಅವರ ಜೀವನ ಚರಿತ್ರೆಗಳನ್ನು ಪ್ರಕಟಿಸಿದ್ದಾರೆ. ...
READ MORE