ಅಪ್ಪಿಕೋ

Author : ಸುರೇಂದ್ರ ಕೌಲಗಿ

Pages 330

₹ 297.00




Year of Publication: 2022
Published by: ಅರ್ಹನಿರ್ಶಿ ಪ್ರಕಾಶನ

Synopsys

ಅಪ್ಪಿಕೋ ಸುಂದರಲಾಲ್ ಬಹುಗುಣರ ಬದುಕು ಮತ್ತು ಹೋರಾಟವನ್ನ ಪರಿಚಯಿಸುವ ಕೃತಿಯಾಗಿದ್ದು ಈ ಕೃತಿಯ ಮೂಲ ಲೇಖಕರು ಜಾರ್ಜ್ ಅಲ್ಪ್ರೆಡ್ ಜೇಮ್ಸ್. ಕನ್ನಡಕ್ಕೆ ಸುರೇಂದ್ರ ಕೌಲಗಿ, ಅರ್ಚನಾ ಖ್ಯಾಡಿ ಅನುವಾದಿಸಿದ್ದಾರೆ. ಈ ಪುಸ್ತಕದ ವಿಶೇಷತೆಯೆಂದರೆ ಇದು ಬರಿ ಸುಂದರಲಾಲ್ ಬಹುಗುಣರ ಬದುಕು ಮತ್ತು ಹೋರಾಟವನ್ನಷ್ಟೇ ಪರಿಚಯಿಸುವುದಿಲ್ಲ. ಬದಲಿಗೆ ಬಹುಗುಣರ ಗುರುಗಳಾದ ಸ್ವತಂತ್ರ ಹೋರಾಟಗಾರ ದೇವ ಸುಮನ್, ಗಾಂಧೀಜಿಯ ಶಿಷ್ಠೆಯಂದಿರಾದ ಮೀರಾ ವೆಹನ್, ಸರಳಾ ಬೆಹನ್, ಬಹುಗುಣರ ಪತ್ನಿ ವಿಮಲಾ, ಚಿಪ್ಸ್ ಚಳವಳಿಗೆ ಜೀವ ಕೊಟ್ಟ ಗೌರಾದೇವಿ, ಮತ್ತಾಕೆಯ ಜೊತೆ ಮರವನ್ನಪ್ಪಿ ಮರಗಳನ್ನು ಕಡಿಯಲೆತ್ತಿದ ಕೊಡಲಿಗೆ ತಮ್ಮ ಜೀವಗಳನ್ನು ಒಡ್ಡಿ ನಿಂತು ಮರಗಳನ್ನು ರಕ್ಷಿಸಿದ ಹೆಣ್ಣುಮಕ್ಕಳು ಇವರೆಲ್ಲರ ಮಹತ್ತರ ಕೆಲಸಗಳು ಇವರನ್ನು ಈ ಮಸ್ತಕದ ಓದು ನಮ್ಮ ಮನದಂಗಳದಲ್ಲಿ ಭಾಷಿಸುತ್ತದೆ. ವಿದೇಶದಿಂದ ಇಲ್ಲಿಗೆ ಬಂದು ಬಹುಗುಣರ ಜೊತೆಗೆ ನೆಲೆಸಿ, ಅವರ ಚಳವಳಿಯಲ್ಲಿ ಭಾಗವಹಿಸಿ, ಅವರ ಪ್ರೇರೇಪಣೆಗಳನ್ನು ಅರಿತು, ಅವರ ಸುತ್ತಮುತ್ತಲಿನವರ ಜೊತೆ ಮಾತುಕತೆ ಮಾಡಿ, ಸಂದರ್ಭಗಳ ಆಳದ ಅಧ್ಯಯನ ನಡೆಸಿ ಸುಂದರಲಾಲ್ ಬಹುಗುಣರ ಬದುಕು ಹೋರಾಟವನ್ನು ಈ ಕೃತಿಯ ಮೂಲಕ ಕಟ್ಟಿಕೊಟ್ಟ ಈ ಪುಸ್ತಕದ ನಿರೂಪಕರಾದ ಜೇಮ್ಸ್ ಜಾರ್ಜ್ ಬಗೆಗೂ ಇನ್ನಿಲ್ಲದ ಅಭಿಮಾನ ಮೂಡುತ್ತದೆ. ಎಂದು ಅಕ್ಷತಾ ಅವರು ಪುಸ್ತಕದ ಪ್ರಕಾಶನದ ನುಡಿಯಲ್ಲಿ ತಿಳಿಸಿದ್ದಾರೆ.

About the Author

ಸುರೇಂದ್ರ ಕೌಲಗಿ

ಸುರೇಂದ್ರ ಕೌಲಗಿಯವರು ನಾಡು ಕಂಡ ಗಾಂಧಿವಾದಿ ಹಾಗೂ ಸರ್ವೋದಯ ಆಂದೋಲನದ ಧುರೀಣ. ಕೌಲಗಿಯವರು ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಪದ ಸೇವಾ ಟ್ರಸ್ಟ್ ನ್ನು ಸ್ಥಾಪಿಸಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದಕ್ಕೂ ಮುನ್ನ 1954- 1956 ಅವಧಿಯಲ್ಲಿ ಶ್ರೀ ಜಯಪ್ರಕಾಶ ನಾರಾಯಣ ಅವರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸುರೇಂದ್ರ ಕೌಲಗಿಯವರನ್ನು ಹೆಗ್ಗೋಡಿನ ದೇಸಿ ಸಂಸ್ಥೆ ೨೦೧೩ರ "ದಾಸಿಮಯ್ಯ ಪ್ರಶಸ್ತಿ" ನೀಡಿ ಗೌರವಿಸಿದೆ. ಅಲ್ಲದೇ ೨೦೧೪ ರ ಸಾಲಿನ ರಾಷ್ಟ್ರೀಯ ಮಟ್ಟದ ‘ಜಮ್ನಲಾಲ್‌ ಬಜಾಜ್‌’ ಪ್ರಶಸ್ತಿ ಕೂಡ ಅವರಿಗೆ ಲಭಿಸಿದೆ. ...

READ MORE

Related Books