ಲೇಖಕ ಸುಭಾಷ್ ಪಟ್ಟಾಜೆ ಅವರು ಬರೆದಿರುವ ಜೀವನ ಚಿತ್ರಣ ಕೃತಿ ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್. ಎ. ನರಸಿಂಹ ಭಟ್ಟರು ಬಹುಭಾಷಾ ವಿದ್ವಾಂಸರು. ಅನುವಾದಕರು. ಡಿ.ವಿ. ಜಿಯವರ ಆದರ್ಶಗಳನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಂಡು ಬಾಳಿದವರು. ಬಿ.ಎ, ಬಿ.ಟಿ ಪದವೀಧರರಾದ ಇವರು ೧೯೫೬ರಂದು ಕಾಸರಗೋಡಿನ ಬೋರ್ಡ್ ಹೈಸ್ಕೂಲಿನ ಅಧ್ಯಾಪಕರಾಗಿ ನೇಮಕಗೊಂಡರು. ಆಮೇಲೆ ಕಾಸರಗೋಡಿನ ಹಲವು ಶಾಲೆಗಳಲ್ಲಿ ಅಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿ ಉಪ ಜಿಲ್ಲಾ ವಿದ್ಯಾಧಿಕಾರಿಗಳಾಗಿ ಭಡ್ತಿಯನ್ನು ಹೊಂದಿದರು. ಅವರ ಮೂವತ್ತಕ್ಕೂ ಹೆಚ್ಚು ಅನುವಾದ ಕೃತಿಗಳು ಮತ್ತು ಸಂಪಾದನ ಗ್ರಂಥಗಳು ಕನ್ನಡ ಸಾರಸ್ವತ ಲೋಕಕ್ಕೆ ಸಂದ ಮಹತ್ವದ ಕೊಡುಗೆಗಳು. ಆ ಕೃತಿಗಳ ಬಗ್ಗೆ ಪರಿಚಯಾತ್ಮಕ ವಿವರಗಳು ಇಲ್ಲಿವೆ.
ಕಾಸರಗೋಡು ಜಿಲ್ಲೆಯ ಪೆರಡಾಲದ ಡಾ.ಸುಭಾಷ್ ಪಟ್ಟಾಜೆ ಅವರು ಕೇರಳದ ಕಣ್ಣೂರು ವಿಶ್ವವಿದ್ಯಾಲಯದ ಕಾಸರಗೋಡು ಸರಕಾರಿ ಕಾಲೇಜು ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಧ್ಯಯನ ಮಾಡಿ ಡಾಕ್ಟರೇಟ್ ಪದವಿ ಪಡೆದವರು. ಹವ್ಯಾಸಿ ಕತೆಗಾರರಾಗಿರುವ ಇವರ ಕತೆ, ಕವನ, ಲೇಖನ ಮತ್ತು ಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಮತ್ತು ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ. ಪ್ರಸ್ತುತ ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿ: ಗೋಡೆ ಮೇಲಿನ ಗೆರೆಗಳು(ಕಥಾಸಂಕಲನ), ಅನುಪಮ ಅಕ್ಷರೋಪಾಸಕ ಎ.ನರಸಿಂಹ ಭಟ್ (ಜೀವನ ಚಿತ್ರಣ) ...
READ MORE