ಅಂಬೇಡ್ಕರ್ ಮಾರ್ಗ

Author : ಸೋಮಲಿಂಗ ಗೆಣ್ಣೂರ

Pages 596

₹ 500.00




Year of Publication: 2021
Published by: ಉದಯ ಪ್ರಕಾಶನ
Address: ನಂ.984, 11ನೇ ಎ ಮುಖ್ಯರಸ್ತೆ, 3ನೇ ವಿಭಾಗ, ರಾಜಾಜಿನಗರ, ಬೆಂಗಳೂರು- 560010
Phone: 08023389143

Synopsys

‘ಅಂಬೇಡ್ಕರ್ ಮಾರ್ಗ’ ಲೇಖಕ ಸೋಮಲಿಂಗ ಗೆಣ್ಣೂರ ಅವರ ಮಹತ್ವದ ಕೃತಿ. ಹಿರಿಯ ಲೇಖಕ ಎಚ್. ಟಿ. ಪೋತೆ ಅವರು ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ. ‘ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಮಗ್ರ ಬರೆಹಗಳನ್ನು ಅನುಸಂಧಾನ ಮಾಡಿ ಸೋಮಲಿಂಗ ಗೆಣ್ಣೂರ ಅವರು ‘ಅಂಬೇಡ್ಕರ್ ಮಾರ್ಗ’ ಎಂಬ ಅಪೂರ್ವ ಕೃತಿಯನ್ನು ರೂಪಿಸಿದ್ದಾರೆ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಜೀವನ ಮತ್ತು ಸಿದ್ಧಾಂತಗಳನ್ನು ಹೋರಾಟ ಸಾಧನೆಗಳ ಸಮಸ್ತ ಮಗ್ಗುಲುಗಳು ಈ ಕೃತಿಯಲ್ಲಿ ಪುನಾರೂಪಣಗೊಂಡಿವೆ. ಸಾಮಾನ್ಯ ಓದುಗರಿಗೆ ಅಂಬೇಡ್ಕರ್ ಬರೆಹಗಳನ್ನು ಓದುವುದು ನಿಜಕ್ಕೂ ಕಷ್ಟ, ಬಾಬಾ ಸಾಹೇಬರ ಬರೆಹಗಳಲ್ಲಿ ಇತಿಹಾಸ, ಮಾನವಶಾಸ್ತ್ರ, ಮನಃಶಾಸ್ತ್ರ, ತರ್ಕಶಾಸ್ತ್ರ, ತತ್ವಶಾಸ್ತ್ರ, ವಿಜ್ಞಾನ ಮುಂತಾದ ಹತ್ತಾರು ಜ್ಞಾನಶಾಖೆಗಳಿವೆ. ಅವುಗಳನ್ನು ಅನುಸಂಧಾನ ಮಾಡುವುದು ಯಾರಿಗಾದರೂ ಕರಕಷ್ಟ, ಅಂಥವರಿಗೆ ಸೋಮಲಿಂಗ ಗೆಣ್ಣೂರ ಅವರ ಈ ಕೃತಿ ಕೈಪಿಡಿಯಾಗಲಿದೆ’ ಎಂದು ಪ್ರಶಂಸಿಸಿದ್ದಾರೆ. ಅಂಬೇಡ್ಕರ್ ಮಾರ್ಗ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜೀವನ, ಹೋರಾಟ, ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಮಹತ್ವದ ಕೃತಿ ಇದು.

About the Author

ಸೋಮಲಿಂಗ ಗೆಣ್ಣೂರ
(05 September 1968)

ಲೇಖಕ ಸೋಮಲಿಂಗ ಗೆಣ್ಣೂರ ಅವರು ಮೂಲತಃ ವಿಜಯಪುರ ಜಿಲ್ಲೆಯ ದೇವರಗೆಣ್ಣೂರ ಗ್ರಾಮದವರು. ತಂದೆ-ಗೋಪಾಲ ಚಲವಾದಿ, ತಾಯಿ ಇಂದ್ರವ್ವ ಚಲವಾದಿ. ಪ್ರಾಥಮಿಕ ವಿದ್ಯಾಭ್ಯಾಸವನ್ನು ದೇವರಗೆಣ್ಣೂರ ಪಡೆದ ಅವರು ಪ್ರೌಢ ಶಿಕ್ಷಣವನ್ನು ಕಂಬಾಗಿ ಹಾಗೂ ಪದವಿ ವ್ಯಾಸಂಗವನ್ನು ವಿಜಯಪುರದ ಎಸ್.ಬಿ.ಆರ್ಟ್ಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಆನಂತರ ಜಮಖಂಡಿ ಸರ್ಕಾರಿ ಶಿಕ್ಷಣ ಕಾಲೇಜಿನಲ್ಲಿ ಬಿ.ಎಡ್. ಪದವಿ ಪಡೆದರು. ಕಲಬುರಗಿಯ ಜೆ.ಟಿ.ಎಸ್. ಕಾಲೇಜಿನಲ್ಲಿ ಪೂರ್ಣಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 1999ರಲ್ಲಿ ಕರ್ನಾಟಕ ಆಡಳಿತ ಸೇವೆಗೆ ಸೇರ್ಪಡೆಯಾದರು. ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ತಹಸಿಲ್ದಾರ್ ಆಗಿ ನೇಮಕರಾದ ಅವರು ಆನಂತರ ಸವದತ್ತಿ ತಾಲ್ಲೂಕಿನ ಮಾನ್ವಿ ಮತ್ತು ...

READ MORE

Related Books