ಅಲ್ಲಮಪ್ರಭು ಜೀವನಚರಿತ್ರೆ ಪುಸ್ತಕವನ್ನು ಲೇಖಕಿ ಶ್ರೀಮಾತೆ ಮಹಾದೇವಿ ಅವರು ರಚಿಸಿದ್ದಾರೆ. ಈ ಪುಸ್ತಕದಲ್ಲಿ ತನಗಾಗಿ ತನ್ನವರಿಗಾಗಿ ಮಾತ್ರ ಬದುಕಿದರೆ ಸಾಲದು ಎಂದು ಸಾರಿ, ಹಿರಿಯ ಬಾಳಿನ ದಾರಿ ತೋರಿಸಿದ ಮಹಾ ಪುರುಷ. ಅಸಾಮಾನ್ಯ ಹುಡುಗ ಎನ್ನಿಸಿಕೊಂಡವನು ಅಸಾಮಾನ್ಯ ಸಾಧಕನಾದ, ಬಸವೇಶ್ವರರಿಂದ ಗೌರವ ಪಡೆದು ಅನುಭವಮಂಟಪದ ಅಧ್ಯಕ್ಷನಾದ ಎಂದು ಅಲ್ಲಮಪ್ರಭುವಿನ ಕುರಿತಾಗಿ ಇಲ್ಲಿ ವರ್ಣಿಸಲಾಗಿದೆ. ಇಲ್ಲಿ ಅವರ ಬದುಕಿನ ಪ್ರಮುಖ ಘಟ್ಟಗಳು, ಅನುಭವ ಮಂಟಪದ ಸುಂದರ ಕ್ಷಣಗಳು ಹೀಗೆ ಅವರ ಬದುಕಿನ ಪ್ರಮುಖ ವಿಷಯಗಳನ್ನು ಲೇಖಕರು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.
ತತ್ವಶಾಸ್ತ್ರಜ್ಞೆ, ಕವಯತ್ರಿ ಮಾತೆ ಮಹಾದೇವಿ ಅವರು 1946 ಮಾರ್ಚಿ 13 ಚಿತ್ರದುರ್ಗದಲ್ಲಿ ಜನಿಸಿದರು. ಮಾತೃವಾಣಿ (ಕವನ ಸಂಕಲನ), ಶಿವಯೋಗಿಣಿ (ಜೀವನ ಕಥೆ), ಮಾತೃಹರಕೆ (ಸಂಪಾದನೆ), ದೇವರ ಮಕ್ಕಳು (ಗದ್ಯ ಕೃತಿ), ಹೆಪ್ಪಿಟ್ಟಹಾಲು (ಕಾದಂಬರಿ), ಸತ್ಯಸಂದೇಹ-ಸಮಾಧಾನ (ಪ್ರಬಂಧಗಳು), ಕ್ರಾಂತಿಯೋಗಿ ಬಸವಣ್ಣ (ಚಿತ್ರಕಥೆ), ಎಲ್ಲರಿಗೆ ಬೆಲ್ಲಾದ ಕಲ್ಯಾಣ ಬಸವಣ್ಣ (ಜನಪದ ಗೀತೆಗಳು), ತರಂಗಿಣಿ (ಕಾದಂಬರಿ). ಅವರ 'ಹೆಪ್ಪಿಟ್ಟ ಹಾಲು' ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 'ತರಂಗಿಣಿ' ಕಾದಂಬರಿಗೆ ತಮ್ಮಣರಾವ್ ಅಮ್ಮಿನಭಾವಿ ಸ್ಮಾರಕ ಪ್ರಶಸ್ತಿಗಳು ಲಭಿಸಿವೆ. ...
READ MORE