ಲೇಖಕ ಡಾ. ರಮೇಶ ಎಸ್. ಕತ್ತಿ ಅವರ ಕೃತಿ- ಅಲೆಮಾರಿ ಅವಧೂತ. ಕವಿ, ಕಾದಂಬರಿಕಾರ ಸಿದ್ಧರಾಮ ಉಪ್ಪಿನ ಅವರ ಬದುಕು ಬರೆಹದ ಚಿತ್ರಣ ನೀಡುತ್ತದೆ. ಸಿದ್ಧರಾಮ ಉಪ್ಪಿನ ಅವರು ಅವಧೂತ ಪ್ರಜ್ಞೆಯ ಲೇಖಕರು. ನೇರ ನಿಷ್ಠುರ ಸರಳ ಸಂಭಾವಿತ ವ್ಯಕ್ತಿ. ಅವರ ಜೀವನ -ಸಾಹಿತ್ಥಕ ಸಾಧನೆಯ ಕಥನವಿದು.
ಚಿಂತಕ ಡಾ.ರಾಮಕೃಷ್ಣ ಮರಾಠೆ ಈ ಕೃತಿಗೆ ಮುನ್ನುಡಿ ಬರೆದಿದ್ದರೆ, ಕಾದಂಬರಿಕಾರ ಡಾ. ಬಾಳಾಸಾಹೇಬ ಲೋಕಾಪುರ, ಬೆನ್ನುಡಿ ಬರೆದಿದ್ದು, ಸಿದ್ಧರಾಮ ಉಪ್ಪಿನ್ ಅವರ ಬದುಕಿನ ಬದ್ಧತೆಯನ್ನು ಶ್ಲಾಘಿಸಿ, ಅವರ ಕುರಿತ ಇಲ್ಲಿಯ ಬರೆಹಗಳು ಅವಧೂತನಂತೆ ಸರಳವಾಗಿ ಬದುಕಿದ ವಿಶಿಷ್ಟ ವ್ಯಕ್ತಿಯ ವ್ಯಕ್ತಿತ್ವವನ್ನು ಪರಿಚಯಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ.
ಡಾ. ರಮೇಶ ಎಸ್. ಕತ್ತಿ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಗ್ರಾಮದವರು. ಅಪ್ಪ: ಸಿದ್ದಣ್ಣ ಅವ್ವ: ಮಹಾದೇವಿ. (ಜನನ: 28.08.1978 ). ಕಡಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಸಿಂದಗಿಯಲ್ಲಿ ಬಿ.ಎ. ಪದವಿ, ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿ.ವಿ.ಯಿಂದ ಎಂ.ಎ, ಹಾಗೂ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬಿ.ಇಡಿ, ಪದವೀಧರರು. ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ಹವ್ಯಾಸಿ ಪತ್ರಕರ್ತರು. ಅವಿಭಜಿತ ಸಿಂದಗಿ ತಾಲೂಕಿನ ಆಲಮೇಲದಲ್ಲಿ (ಈಗ ತಾಲೂಕು ಕೇಂದ್ರ) ವಾಸವಾಗಿದ್ದು, ‘ವಿಜಯಪುರ ಜಿಲ್ಲೆಯ ಸಣ್ಣ ಕತೆಗಳು’ ವಿಷಯವಾಗಿ ಗುಲಬರ್ಗಾ ವಿ.ವಿ. ಯಲ್ಲಿ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್ ಡಿ ದೊರೆತಿದೆ. ಕೃತಿಗಳು : ಕಾಮಸ್ವರ್ಗದ ಹಾದಿ ಹಿಡಿದು, ಏನನ್ನೂ ಹೇಳುವುದಿಲ್ಲ (ಕವನ ಸಂಕಲನಗಳು),, ...
READ MORE