ಆಲ್ಬರ್ಟ್ ಐನ್‌ಸ್ಟೈನ್ : ವಿಶ್ವಮಾನ್ಯರು ಎಂಬ ಪುಸ್ತಕವನ್ನು ಲೇಖಕಿ ನೇಮಿಚಂದ್ರ ಬರೆದಿದ್ದಾರೆ. ಆಲ್ಬರ್ಟ್ ಐನ್‌ಸ್ಟೈನ್ (1879-1955) ಮನುಕುಲವು ಕಂಡ ಅತ್ಯಂತ ಪ್ರತಿಭಾವಂತರಲ್ಲಿ ಒಬ್ಬ ಎನ್ನುವುದರಲ್ಲಿ ಅನುಮಾನವಿಲ್ಲ. ನ್ಯೂಟನ್ ಗುರುತ್ವಾಕರ್ಷಣ ನಿಯಮಗಳನ್ನು ಕಂಡುಹಿಡಿದ ಮೇಲೆ, ಭೌತ ವಿಜ್ಞಾನದಲ್ಲಿ ಕಂಡುಹಿಡಿಯಲು ಮತ್ತೇನೂ ಉಳಿದಿಲ್ಲ ಎಂದು ಬ್ರಿಟಿಷರು ಭಾವಿಸುವ ಹೊತ್ತಿನಲ್ಲಿ, ಜರ್ಮನ್ ಸಂಜಾತ ಐನ್‌ಸ್ಟೈನ್, ಸಾಪೇಕ್ಷತಾ ಸಿದ್ಧಾಂತವನ್ನು ಮಂಡಿಸುವುದರ ಜೊತೆಯಲ್ಲಿ ಕ್ವಾಂಟಮ್ ಮೆಕಾನಿಕ್ಸ್ ಸಿದ್ಧಾಂತಕ್ಕೆ ಭದ್ರವಾದ ತಳಪಾಯವನ್ನು ಹಾಕಿ, ಆಧುನಿಕ ಭೌತವಿಜ್ಞಾನವನ್ನು ಭದ್ರವಾದ ಎರಡು ಆಧಾರ ಸ್ತಂಭಗಳ ಮೇಲೆ ನಿಲ್ಲಿಸಿದ. ದ್ರವ್ಯರಾಶಿ ಮತ್ತು ಶಕ್ತಿ ಒಂದಕ್ಕೊಂದು ಸಮ ಎನ್ನುವ ಆತನ ಇ=ಎಂಸಿ (E=mc) ಸಮೀಕರಣವು, ಬಹುಶಃ ಜಗತ್ತಿನ ಅತ್ಯಂತ ಪ್ರಮುಖ ಹಾಗೂ ಪ್ರಸಿದ್ಧ ಸಮೀಕರಣ. ಇದೆಲ್ಲವನ್ನೂ ಈ ಪುಸ್ತಕದಲ್ಲಿ ನಿರೂಪಿಸಲಾಗಿದೆ.
ಸ್ತ್ರೀವಾದಿ ಚಿಂತಕಿ, ಸಾಹಿತಿ ನೇಮಿಚಂದ್ರ ಅವರು ಜನಿಸಿದ್ದು 1959 ಜುಲೈ 16ರಂದು ಮೂಲತಃ ಚಿತ್ರದುರ್ಗದವರಾದ ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೀವನುತ್ಸಾಹ ತುಂಬುವಂತಹ ಇವರ ಕೃತಿಗಳೆಂದರೆ ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಒಂದು ಶ್ಯಾಮಲ ಸಂಜೆ, ನೇಮಿಚಂದ್ರರ ಕಥೆಗಳು, ಸಾವೇ ಬರುವುದಿದ್ದರೆ ನಾಳೆ ಬಾ!, ನನ್ನ ಕಥೆ ನಮ್ಮ ಕಥೆ, ಯಾದ್ ವಶೇಮ್, ಮಹಿಳಾ ಅಧ್ಯಯನ, ದುಡಿವ ಹಾದಿಯಲಿ ಜೊತೆಯಾಗಿ, ಬೆಳಗೆರೆ ಜಾನಕಮ್ಮ ಬದುಕು-ಬರಹ, ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು, ಬದುಕು ಬದಲಿಸಬಹುದು, ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ, ಸಂತಸ ನನ್ನೆದೆಯ ಹಾಡು ಹಕ್ಕಿ (ಬದುಕು ಬದಲಿಸಬಹುದು ಭಾಗ -4), ಕಾಲುಹಾದಿಯ ಕೋಲ್ಮಿಂಚುಗಳು- ...
READ MORE