ಕಲಾವಿಮರ್ಶಕರಾದ ಕೃಷ್ಣ ಪ್ರಕಾಶ ಉಳಿತ್ತಾಯ ಅವರ ’ಅಗರಿ ಮಾರ್ಗ’ ಕೃತಿಯು ತೆಂಕುತಿಟ್ಟಿನ ಯಕ್ಷಗಾನ ಪ್ರದರ್ಶನ ಕಲೆಯಲ್ಲಿ ಯಕ್ಷಬ್ರಹ್ಮ ಎಂದು ಪ್ರಸಿದ್ದರಾದ ಅಗರಿ ಶ್ರೀನಿವಾಸ ಭಾಗವತರ ಬಗ್ಗೆ ಕುರಿತು ಪರಿಚಯಿಸುತ್ತದೆ.
ಯಕ್ಷಗಾನ, ಭಾಗವತಿಕೆಯಲ್ಲಿ ಆಯಾ ಪಾತ್ರದ ಸ್ವಭಾವವನ್ನು ಸರಿಯಾಗಿ ಮನದಟ್ಟು ಮಾಡಿಕೊಂಡು ಪದ್ಯದ ಅರ್ಥ ಕೆಡುವಂತೆ ಹಾಡಲೇಬಾರದು ಎಂಬ ಶಿಸ್ತನ್ನು ಬೆಳೆಸಿಕೊಂಡು ಹರಡಿದವರು ಅಗರಿ ಶ್ರೀನಿವಾಸ ಭಾಗವತರು.
ಅಗರಿ ಮಟ್ಟು ಎಂಬ ಮಾರ್ಗಪ್ರವರ್ತಕರಾಗಿ, ಅಗರಿಯವರು ಹಾಡುವ ಕ್ರಮದಲ್ಲಿ, ರಚನೆಯ ಪ್ರತಿಭೆಯಲ್ಲಿ, ಪ್ರದರ್ಶಿಸುವ ಚತುರತೆಯಲ್ಲಿ ಅಗ್ರಮಾನ್ಯರು. ಪದ್ಯಖಂಡಗಳ ಪುನರಾವರ್ತನೆ, ಆಲಾಪನೆ, ಸ್ವರಭೇದ, ರಾಗಪರಿವರ್ತನೆ, ತಾಳಭೇದ ಮುಂತಾದ ಸಂದರ್ಭಗಳಲ್ಲಿಯೂ ಸಾಹಿತ್ಯ ವೈಶಿಷ್ಟ್ಯವು ಅಗರಿಯವರ ಹಾಡುಗಾರಿಕೆಯಲ್ಲಿ ಸದಾ ಕಾಣಿಸುವಂತದ್ದು.
ಈ ಪುಸ್ತಕದ ಮುನ್ನುಡಿಯನ್ನು ಬರೆದಿರುವ ವಿದ್ವಾಂಸರೂ, ಚಿಂತಕರೂ ಆದ ಲಕ್ಷ್ಮೀಶ ತೋಳ್ಪಾಡಿಯವರ ಮಾತುಗಳು ಇಂತಿವೆ. ’ ಅಗರಿ ಮಾರ್ಗ ಕೃತಿಯು ಅಗರಿ ಶ್ರೀನಿವಾಸ ಭಾಗವತರ ಬಗೆಗೆ ಹೇಳುತ್ತಲೇ ಅನಿವಾರ್ಯವಾಗಿ ಕಲಾಸಂಬಂಧಿಯಾದ ಮೀಮಾಂಸೆಯಾಗಿಯೂ ಮೂಡಿಬಂದಿದೆ’. ಅಗರಿ ಮಾರ್ಗವೆಂಬ ಈ ಹೊತ್ತಗೆಯಲ್ಲಿರುವ ಈ ಒಂದು ವಾಕ್ಯ ನನ್ನೊಳಗೆ ಬೇರೂರಿ ನಿಂತು ಬಿಟ್ಟಿತು. ’ಕಾಲ’ಗಾರಿಕೆ ಹಾಡಿನಲ್ಲಿ ಸಿದ್ದಿಸಿದರೆ ಪದ್ಯದ ಚಲನೆಯೇ ತಾಳವಾಗುತ್ತದೆ !’ ಎಂಬ ವಾಕ್ಯವದು. ಆಹಾ ! ಜೇಡರಹುಳ ತನ್ನೊಡಲಿನಿಂದಲೇ ದಾರವನ್ನು ಎಳೆದಂತೆ ಇದೆ ಈ ಸಾಲು! ಇಂಥ ಸಾಲುಗಳು ನಮ್ಮ ಮನಸ್ಸನ್ನೇ ಒಳನೂಕಿ ಕಲೆಯ ಒಳಗಿರುವ ಐಕ್ಯವನ್ನು ನೋಡು ಎಂದು ಒತ್ತಾಯಿಸುತ್ತವೆ. ವಿಮರ್ಶೆಯ ಭಾಷೆ ಮತ್ತು ಕಲೆಯ ಭಾಷೆಗಳನ್ನು ಬೆಸೆಯಬಲ್ಲ ವಿಮರ್ಶಕನೊಬ್ಬ ಕಾಣಿಸಿಕೊಂಡಿದ್ಧಾನೆ ಎಂದು ನನಗೆ ಮನವರಿಕೆಯಾಗುತ್ತಿದೆ.ಇಡೀ ಬರಹದಲ್ಲಿ ಕಲಾವಿದನಲ್ಲಿರುವ ಮನೋಧರ್ಮ ಎದ್ದು ಕಾಣುತ್ತದೆ.’ ಎಂದಿದ್ದಾರೆ.
ಕೃಷ್ಣಪ್ರಕಾಶ ಉಳಿತ್ತಾಯ ಅವರು ಮೂಲತಃ ಮಂಗಳೂರಿನ ಉಳಾಯಿಬೆಟ್ಟು ಸಮೀಪದ ಪೆರ್ಮಂಕಿನವರು. ತಂದೆ ವೆಂಕಟೇಶ ಉಳಿತ್ತಾಯ ಹಾಗೂ ತಾಯಿ ಅಮರಾವತಿ. ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿಯಾದ ಕೃಷ್ಣ ಪ್ರಕಾಶ ಉಳಿತ್ತಾಯ ಅವರು ಯಕ್ಷಗಾನ ಕಲಾವಿದ, ಕಲಾವಿಮರ್ಶಕರೂ ಕೂಡ. ಈಗಾಗಲೆ ಯಕ್ಷಗಾನ ಪರಂಪರೆಯಲ್ಲಿ ಇವರ ಹೆಸರು ಚಿರಪರಿಚಿತವಾಗಿದೆ. ಓದಿದ್ದು ಕಾನೂನು ಸ್ನಾತಕೋತ್ತರ ಪದವಿ ( LLM) ಯಾದರೂ ಇವರ ಯಕ್ಷಗಾನ ಕಲೆಯ ಕೊಡುಗೆ ಅನನ್ಯವಾದುದು. ಯಕ್ಷಗಾನ ನಾಟ್ಯಾಭ್ಯಾಸವನ್ನು ಸಬ್ಬಣಕೋಡಿ ರಾಮ ಭಟ್ ಅವರಿಂದ ಕಲಿತು ಯಕ್ಷಗಾನ ಹಿಮ್ಮೇಳ ಚೆಂಡೆ ಮದ್ದಳೆಯನ್ನು ದಿ.ಪುಂಡಿಕಾಯಿ ಕೃಷ್ಣ ಭಟ್, ಶ್ರೀ ಮೋಹನ ಬೈಪಾಡಿತ್ತಾಯ ಅವರಿಂದ ಕಲಿತಿದ್ದಾರೆ. ಇದಲ್ಲದೇ ಕರ್ಣಾಟಕ ಶಾಸ್ತ್ರೀಯ ಮೃದಂಗವಾದನವನ್ನು ವಿ. ತ್ರಿಚ್ಚಿ ...
READ MORE