'ಅಡ್ಡಗೋಡೆಗಳನ್ನೊಡೆದು...' ಪುಸ್ತಕದಲ್ಲಿ ತಮಗೆ ಎದುರಾದ ಅಡೆತಡೆಗಳನ್ನು ಎದುರಿಸಿ ಮುನ್ನಡೆದ ಹನ್ನೆರಡು ಮಹಿಳೆಯರ ಯಶಸ್ಸಿನ ಕಥೆಗಳಿವೆ. ತಮ್ಮ ಬದುಕಿನುದ್ದಕ್ಕೂ ಒಂದು ಶೋಷಣಾತ್ಮಕ ಯಥಾಸ್ಥಿತಿಗೆ ಸವಾಲೆಸೆದು, ಭಾರತದಲ್ಲಿ ಒಂದು ಮಹಿಳಾ ವಿಮೋಚನೆಯ ಆಂದೋಲನವನ್ನು ಕಟ್ಟಲು ಶ್ರಮಿಸಿದ ಹನ್ನೆರಡು ಮಹಿಳೆಯರನ್ನು ಕುರಿತ ಪುಸ್ತಕವಿದು. ಇವು ಆಸಾಮಾನ್ಯ ಬದುಕುಗಳ ಆಸಾಮಾನ್ಯ ಕಥೆಗಳು.
ಈ ಪುಸ್ತಕದಲ್ಲಿ ಅಹಲ್ಯಾ ರಂಗೇಕರ್ ಇಳಾ ಭಟ್ಟಾಚಾರ್ಯ, ಕನಕ ಮುಖರ್ಜಿ, ಲಕ್ಷ್ಮೀ ಸೆಹಗಲ್, ಮಲ್ಲು ಸ್ವರಾಜ್ಯಂ, ಮಂಗಳೇಶ್ವರಿ ದೇಬ್ ಬರ್ಮಾ, ಮಂಜರಿ ಗುಪ್ತ, ಮೋಟೂರು ಉದಯಂ, ಪಂಕಜ ಆಚಾರ, ಪಪ್ಪ ಉಮಾನಾಥ್, ಸುಶೀಲಾ ಗೋಪಾಲನ್, ವಿಮಲ ರಣದಿವೆ ಅವರ ಸಾಧನೆಯನ್ನು ವಿವರಿಸಲಾಗಿದೆ.
ಪಾರ್ವತಿ ಮೆನನ್ ಅವರ ಕೃತಿಯನ್ನು ಡಾ. ಎನ್.ಗಾಯತ್ರಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮುನ್ನುಡಿಯಲ್ಲಿ ಬೃಂದಾ ಕಾರಟ್ ಅವರು ’ಭಾರತದ ವಿಭಿನ್ನ ಪ್ರದೇಶಗಳಿಂದ, ವಿಭಿನ್ನ ಹಿನ್ನೆಲೆಗಳಿಂದ ಬಂದವರು. ಆದರೆ ಅವರೆಲ್ಲರಲ್ಲಿದ್ದ ಒಂದು ಸಮಾನ ಸಂಗತಿಯೆಂದರೆ ಭಾರತ ಇನ್ನೂ ಬ್ರಿಟಿಷರ ದಾಸ್ಯದಲ್ಲಿದ್ದಾಗ ಅದರ ವಿರುದ್ಧ ಹೋರಾಟಗಳಲ್ಲಿ ರಾಜಕೀಯ ಪ್ರವೇಶಿಸಿದವರು. ಕಟ್ಟುಪಾಡುಗಳನ್ನು ಮುರಿದು, ಕೆಲವೊಮ್ಮೆ ತಮ್ಮ ಕುಟುಂಬಗಳ ವಿರೋಧವನ್ನೂ ಎದುರಿಸಿ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದವರು. ಕಾರ್ಮಿಕ ಆಂದೋಲನದ ಮುಖಂಡರಾಗಿ, ರೈತ ಆಂದೋಲನದ ಮುಖಂಡರಾಗಿ ಹೆಚ್ಚೆಚ್ಚು ಮಹಿಳೆಯರನ್ನು ಕಾರ್ಯಾಚರಣೆಗೆ ಇಳಿಸಲು ಶ್ರಮಿಸಿದವರು. ಮುಂದೆ ಸ್ವತಂತ್ರ ಭಾರತದಲ್ಲೂ ತಮ್ಮ ಚಟುವಟಿಕೆಗಳನ್ನು ಮುಂದುವರೆಸಿ ಮಹಿಳಾ ಆಂದೋಲನವನ್ನು ಕಟ್ಟಿ ಬೆಳೆಸುವುದರೊಂದಿಗೆ ಮಹಿಳೆಯರ ಪ್ರಶ್ನೆಗಳನ್ನು, ಲಿಂಗ ಅಸಮಾನತೆಯ ಪ್ರಶ್ನೆಯನ್ನು ಒಟ್ಟು ರಾಜಕೀಯ ಮತ್ತು ಆರ್ಥಿಕ ಪ್ರಶ್ನೆಯೊಂದಿಗೆ ಬೆಸೆಯಲು ಪರಿಣಾಮಕಾರಿ ಪಾತ್ರ ವಹಿಸಿದವರು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೀಷ್ ಭಾಷೆಯಲ್ಲಿ ಪಾರ್ವತಿ ಮೆನನ್ ಅವರ ಕೃತಿಯನ್ನು ನವದೆಹಲಿಯ `ಲೆಫ್ಟ್ ವರ್ಡ್’ ಪ್ರಕಟಿಸಿತ್ತು. ಅಧ್ಯಯನ ಪ್ರಕಾಶನವು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಬೆಳ್ಳಿಹಬ್ಬದ ಆಚರಣೆಯ ಸಂದರ್ಭದಲ್ಲಿ ಕನ್ನಡ ಅನುವಾದವನ್ನು. ಇದು ಕನ್ನಡ ಅನುವಾದದ ಎರಡನೇ ಮುದ್ರಣ.
ಲೇಖಕಿ ಡಾ. ಎನ್. ಗಾಯತ್ರಿ ಮೂಲತಃ ಬೆಂಗಳೂರಿನವರು. 1957 ರ ಜನೆವರಿ 17 ರಂದು ಜನನ. ಸಾಹಿತ್ಯದಲ್ಲಿ ಎಂ.ಎ ಹಾಗೂ ಪಿಎಚ್.ಡಿ ಪದವೀಧರರು. ರಿಸರ್ವ್ ಬ್ಯಾಂಕಿನಲ್ಲಿ ಅಧಿಕಾರಿ.ಮಹಿಳಾ ಪರ ಚಿಂತಕಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ. 22 ವರ್ಷ ಕಾಲ 'ಅಚಲ' ಮಾಸಪತ್ರಿಕೆಯ ಸಂಪಾದಕಿಯಾಗಿದ್ದು ಮಹಿಳಾ ಹೋರಾಟಗಳಿಗೆ ಸೈದ್ಧಾಂತಿಕ ನೆಲೆ ಕಲ್ಪಿಸಿಕೊಟ್ಟವರು. ಈಗ 'ಹೊಸತು' ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು 'ಮಹಿಳೆ: ಬಿಡುಗಡೆಯ ಹಾದಿಯಲ್ಲಿ’, 'ಮಹಿಳಾ ಚಳವಳಿಯ ಮಜಲುಗಳು’, 'ಮುಖಾಮುಖಿ', 'ಕ್ಲಾರಾ ಜೆಟ್ಕಿನ್, 'ಮಹಿಳಾ ಮೀಸಲಾತಿ' ಮತ್ತು 'ಲಿಂಗ ರಾಜಕಾರಣ', ಫ್ರೆಡರಿಕ್ ...
READ MORE