ಭಾರತ ರತ್ನ ಸಿ. ರಾಜಗೋಪಾಲಚಾರಿ ಅವರ ಜೀವನಚಿತ್ರವನ್ನು ಲೇಖಕ ಮ.ಸು. ಮನ್ನಾರ್ ಕೃಷ್ಣರಾವ್ ಅವರು ‘ಅದ್ಭುತ ಅದಮ್ಯ ಚೇತನ ರಾಜಾಜಿ’ ಶೀರ್ಷಿಕೆಯಡಿ ಕಟ್ಟಿಕೊಟ್ಟ ಕೃತಿ. ತಮಿಳುನಾಡಿನ ಮೂಲ ನಾಯಕ, ಮುತ್ಸದ್ಧಿ ಸಿ. ರಾಜಗೋಪಾಲಚಾರಿ ಅವರು ರಾಜನೀತಿಜ್ಞರು. ಆಡಳಿತಾತ್ಮಕವಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿ, ಕೇಂದ್ರ ಸರ್ಕಾರದ ಮೂಲಕ ಜಾರಿಗೊಳಿಸುವ ಜನಸೇವಕರು. ಭಾರತದ ಆಡಳಿತದ ಜೊತೆಗೆ ಜನರ ಅಭಿವೃದ್ಧಿಯತ್ತ ಚಿಂತನೆ ನಡೆಸಿದವರು. ಇಂತಹ ನಾಯಕರ ಕುರಿತು ಲೇಖಕರು ಅವರ ವ್ಯಕ್ತಿಗತ ಜೀವನ, ರಾಜನೀತಿಯ ಸ್ವರೂಪ ಇತ್ಯಾದಿ ಪರಿಚಯಿಸುವ ಕೃತಿ ಇದು.
ಮ.ಸು. ಮನ್ನಾರ್ ಕೃಷ್ಣರಾವ್ ಮಂಡ್ಯ ನಗರದ ಮೈಷುಗರ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈವರೆಗೆ 12 ಕವನ ಸಂಕಲನಗಳು, 8 ಸತ್ಯ ಘಟನೆಗಳ ಗದ್ಯ ಕೃತಿಗಳು ಮತ್ತು ಅದ್ವಿತೀಯ ಭಾರತೀಯ ಜಿ.ಡಿ. ಬಿರ್ಲಾ ಅವರ ಜೀವನ ಚರಿತ್ರೆಗಳನ್ನು ಪ್ರಕಟಿಸಿದ್ದಾರೆ. ...
READ MORE