ಹತ್ತನೆಯ ಶತಮಾನದಲ್ಲಿದ್ದ ಅಭಿನವಗುಪ್ತ ಕವಿ, ವ್ಯಾಖ್ಯಾನಕಾರ, ದಾರ್ಶನಿಕ,ಅನುಭಾವಿ, ಗಾಯಕ, ಯೋಗಿ. ಅವನು ದರ್ಶನ, ತಂತ್ರ, ಅಲಂಕಾರ ಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ನಲವತ್ತಕ್ಕೂ ಹೆಚ್ಚಿನ ಗ್ರಂಥಗಳನ್ನು ರಚಿಸಿದವನು. ಕನ್ನಡ ಕಾವ್ಯಾಲಂಕಾರ, ಛಂದಸ್ಸಿನ ಅಧ್ಯಯನದಲ್ಲಿ ನೆರವಾಗುವ ರಸ, ಧ್ವನಿ, ಪ್ರತಿಮೆಗಳನ್ನು ಅರಿಯುವಾಗ, ವಿಚಾರ ಮಾಡುವಾಗ ಅಭಿನವಗುಪ್ತ ಅನಿವಾರ್ಯವಾಗುತ್ತಾನೆ.
ಇಂತಹ ಪ್ರತಿಭಾನ್ವಿತ ಗ್ರಂಥಕಾರನ ಬಗ್ಗೆ ಬಹುಶ್ರುತ ವಿದ್ವಾಂಸರಾದ ಪ್ರೊ. ಸಾ.ಕೃ. ರಾಮಚಂದ್ರರಾವ್ ರಚಿಸಿರುವ ಕೃತಿ ’ಅಭಿಜ್ಞಾನ’ ಪ್ರಕಾಶನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಸೇರ್ಪಡೆಗೊಂಡಿದೆ.
ಪ್ರೊ. ಎಸ್.ಕೆ. ರಾಮಚಂದ್ರ ರಾವ್ ಅವರು ಅದ್ವಿತೀಯ ವಿದ್ವಾಸರು. ಹಾಸನದಲ್ಲಿ ಜನಿಸಿದರು. ತಂದೆ ಶ್ರೀಕೃಷ್ಣ ನಾರಾಯಣ ರಾವ್, ತಾಯಿ ಕಮಲಾಬಾಯಿ. ಬೆಂಗಳೂರಿನಲ್ಲಿಯ ತಾತನ ಮನೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಇವರು 12ನೇ ವಯಸ್ಸಿನಲ್ಲಿದ್ದಾಗ ತಾತನವರು ತೀರಿಕೊಂಡರು. ನಂತರ ನಂಜನಗೂಡಿಗೆ ಹೋಗಿ ತಂದೆಯವರಲ್ಲಿ ನೆಲೆಸಿ ಸಂಸ್ಕೃತಾಭ್ಯಾಸ ಮುಂದುವರಿಸಿದರು. ಅಲ್ಲಿ ಶೃಂಗೇರಿಯ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳ ಸಂಪರ್ಕದಲ್ಲಿ ವಿದ್ಯಾಭ್ಯಾಯ ನಡೆಯಿತು. ಮೈಸೂರಿನ ಮಹಾರಾಜ ಕಾಲೇಜು ಹಾಗೂ ಮಾನಸ ಗಂಗೋತ್ರಿಯಲ್ಲಿ ವಿದ್ಯಾಭ್ಯಾಸ ಮಾಡಿ, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇವರಿಗೆ ಸಂಗೀತಾಭ್ಯಾಸದ ಆಸಕ್ತಿ ಯೂ ಆಪಾರವಾಗಿತ್ತು. ಭಾರತೀಯ ವಿಜ್ಞಾನ ಸಂಶೋಧನೆ ಸಂಸ್ಥೆಯಲ್ಲಿ ...
READ MORE