ಆರ್ಕಿಮಿಡೀಸ್ ಪ್ರಾಚೀನ ಗ್ರೀಕ್ ಗಣಿತಜ್ಞ, ಭೌತಶಾಸ್ತ್ರಜ್ಞ, ಎಂಜಿನಿಯರ್ ಮತ್ತು ಖಗೋಳಶಾಶ್ತ್ರಜ್ಞ. ಗೆಲಿಲಿಯೋ ತನ್ನ ಬರಹಗಳಲ್ಲಿ ಆರ್ಕಿಮಿಡೀಸನನ್ನು ಪದೇ ಪದೆ ನೆನಪಿಸಿಕೊಳ್ಳುತ್ತಾ ಆತನನ್ನು ‘ಅತಿಮಾನವ‘ (ಸೂಪರ್ಹ್ಯೂಮನ್) ಎಂದು ಕರೆದಿದ್ದಾನೆ. ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯವು ಆರ್ಕಿಮಿಡೀಸನ ‘ಯುರೇಕಾ‘ ಎನ್ನುವ ಶಬ್ದವನ್ನು ತನ್ನ ಘೋಷವಾಕ್ಯವನ್ನಾಗಿ ಆರಿಸಿಕೊಂಡ ಮಹಾನ್ ವ್ಯಕ್ತಿಯ ಜೀವನ ಚರಿತ್ರೆಯನ್ನು ಈ ಕೃತಿಯಲ್ಲಿ ಲೇಖಕಿ ಸುಮಂಗಲಾ ಎಸ್. ಮುಮ್ಮಿಗಟ್ಟಿ ಅವರು ಸಂಕ್ಷಿಪ್ತವಾಗಿ ನೀಡಿದ್ದಾರೆ. ಈ ಕೃತಿಯನ್ನು ನಾ. ಸೋಮೇಶ್ವರ ಸಂಪಾದಿಸಿದ್ದಾರೆ.
ವಿಜ್ಞಾನ ಸಂವಹನಕ್ಕಾಗಿ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿ ಪುರಸ್ಕೃತರಾದ ಸುಮಂಗಲಾ ಅವರು ಈ ಪರಿಸರ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಲ್ಲದೇ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಆಕಾಡಮಿಯಿಂದ ಶ್ರೇಷ್ಠ ವಿಜ್ಞಾನ ಲೇಖಕಿ ಪ್ರಶಸ್ತಿ ಪಡೆದಿದ್ದಾರೆ. ಜೈವಿಕ ವೈವಿಧ್ಯದ ಅತ್ಯುತ್ತಮ ಸಂವಹನಕ್ಕಾಗಿ ಲಂಡನ್ನಿನ ಎನ್ವಿರಾನ್ಮೆಂಟ್ ಎಜುಕೇಶನ್ ಸಂಸ್ಥೆಯ ಮನ್ನಣೆ ಪಡೆದಿದ್ದಾರೆ. ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿರುವ ಇವರು ವಿಜ್ಞಾನ ಕಾರ್ಯಕ್ರಮಗಳಿಗಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದವರು. ಇವರ ಹಲವು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ. ನವಕರ್ನಾಟಕದ ವಿಜ್ಞಾನ ಸರಳ ಪರಿಚಯ ಮಾಲಿಕೆಯ ಸಂಪಾದಕರಲ್ಲಿ ಒಬ್ಬರು. ಇವರ ಹಲವಾರು ಪುಸ್ತಕ- ಲೇಖನ ...
READ MORE