ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜವಾದಿ, ಮಹಿಳಾವಾದಿ, ಬರಹಗಾರ್ತಿ, ಭಾಷಣಗಾರ್ತಿ ಆನಿ ಬೆಸೆಂಟ್ ನಂಬಿಕೆಯಿಲ್ಲದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳಲಾರೆ ಎಂದು ಚರ್ಚಿಗೆ ಹೋಗುವುದನ್ನು ನಿಲ್ಲಿಸಿದವರು. ಸಮಾನತೆಯ ಪರವಾಗಿ ದನಿ ಎತ್ತಿದವರು.
ಪತಿ ಫ್ರಾಂಕ್ ಬೆಸೆಂಟ್, ತನ್ನ ಅಡಿಯಾಳಾಗಿ ಪತ್ನಿ ಬದುಕಬೇಕು ಎಂದು ನಿರೀಕ್ಷಿಸಿದ್ದರು. ಇದನ್ನು ಆನಿ ಬೆಸೆಂಟ್ ವಿರೋಧಿಸಿದರು. ಪತ್ನಿಯಾದವಳು ಹಣ, ಆಸ್ತಿಯನ್ನು ಇಟ್ಟುಕೊಳ್ಳುವ ಹಾಗಿಲ್ಲ ಎಂದಾಗ, ಆನಿ ಬೆಸೆಂಟ್ ನ್ಯಾಯಾಧೀಯರ ಮುಂದೆ ವಾದ ಮಾಡಿ ವಿವಾಹ ವಿಚ್ಛೇದನ ಪಡೆದರು. ಡಾ. ನಾ. ಸೋಮೇಶ್ವರ ಅವರು ಕೃತಿಯನ್ನು ಸಂಪಾದಿಸಿದ್ದಾರೆ.
ಥಿಯೋಸಾಫಿಕಲ್ ಸೊಸೈಟಿಯನ್ನು ಸ್ಥಾಪಿಸಿದ ಆನಿ ಬೆಸೆಂಟ್ ಅವರ ಸಾಧನೆ-ಬದುಕಿನ ಅನನ್ಯ ವಿಷಯಗಳನ್ನು ಗೀತಾ ಶೆಣೈ ಅವರು ಕನ್ನಡದ ಓದುಗರಿಗೆ ನೀಡಿದ್ದಾರೆ.
ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'. ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...
READ MORE