ಕನ್ನಡವನ್ನು ವಿವಿಧ ನೆಲೆಗಳಲ್ಲಿ ಬೆಳೆಸಿದ ಸಾಹಿತಿ ಅ.ನ.ಕೃ ಅವರು ಕನ್ನಡ ನಾಡು, ನುಡಿಯನ್ನು ತೀವ್ರವಾಗಿ ಪ್ರೀತಿಸಿದವರು. ನಾಡಿನ ಸರ್ವಾಂಗೀಣ ಅಭಿವೃದ್ಧಿಯ ಕನಸು ಕಂಡ ಅ.ನ. ಕೃಷ್ಣರಾಯರು, ತಮ್ಮ ಸಾಹಿತ್ಯದ ಮೂಲಕ, ಅಪ್ರತಿಮ ಭಾಷಣಗಳ ಮೂಲಕ ಜನಸಮುದಾಯವನ್ನು ಜಾಗೃತಗೊಳಿಸಿದವರು. ಪ್ರಸ್ತುತ ಕೃತಿಯ ಮೂಲಕ ಲೇಖಕ ಶಾ.ಮಂ. ಕೃಷ್ಣರಾಯ ಅವರು ಅ.ನ.ಕೃ ಅವರನ್ನು ಪರಿಚಯಿಸಿದ್ದಾರೆ.
ಶಾ.ಮಂ. ಕೃಷ್ಣರಾವ್ ಮೂಲತಃ ಬೆಳಗಾವಿಯವರು. ತಂದೆ- ಮಂಜುನಾಥ ಶ್ಯಾನಭಾಗ, ತಾಯಿ- ಗಂಗಾದೇವಿ. ಪ್ರಾಥಮಿಕ -ಪ್ರೌಢಶಿಕ್ಷಣವನ್ನು ಸಿದ್ಧಾಪುರದಲ್ಲಿಪಡೆದರು. ಉದ್ಯೋಗದ ನಿಮಿತ್ತ ತಂದೆಯವರು ಗೋವಾಗೆ ವಾಸ್ತವ್ಯ ಬದಲಿಸಿದ್ದರಿಂದ ಇವರ ಕಾಲೇಜು ಶಿಕ್ಷಣ ಗೋವಾದಲ್ಲಿ ಮುಂದುವರೆಯಿತು. ಸಿದ್ದಾಪುರ ತಾಲೂಕಿನ ಅಳವಳ್ಳಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಕಾಲ ಸೇವೆ ಸಲ್ಲಿಸಿದ್ದರು. ಬಾಹ್ಯವಿದ್ಯಾರ್ಥಿಯಾಗಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ, ಬಿ.ಎಡ್ ಪದವಿ ಪೂರ್ಣಗೊಳಿಸಿದರು. ಗೋವಾದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾಗಿ ಸೇರಿ ಜ್ಯೂನಿಯರ್ ಕಾಲೇಜು ಮಟ್ಟದ ತರಗತಿಗಳಿಗೂ ಬೋಧಿಸಿ, 41 ವರ್ಷಗಳ ಸೇವೆಯ ನಂತರ ನಿವೃತ್ತಿಯಾದರು. ಗೋವಾದಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಒಂದು ದೀಕ್ಷೆ ಎಂಬಂತೆ ಸ್ವೀಕರಿಸಿದ್ದು, ಅಲ್ಲಿದ್ದ ಕೇವಲ 813 ಕನ್ನಡಿಗರಿಗೆ (1961 ಜನಗಣತಿ ...
READ MORE