108 ರಂಗಮುಖಗಳು

Author : ರಾಜಶೇಖರ ಕದಂಬ

Pages 270

₹ 250.00




Published by: ಭಾರತಿ ಪ್ರಕಾಶನ
Address: ಸರಸ್ವತಿಪುರಂ, ಮೈಸೂರು, ಕರ್ನಾಟಕ 570009
Phone: 0821254 3941

Synopsys

‘108 ರಂಗಮುಖಗಳು ’ ಕೃತಿಯು ರಾಜಶೇಖರ ಕದಂಬ ಅವರ ಕರ್ನಾಟಕದಲ್ಲಿನ ರಂಗಕರ್ಮಿಗಳ ಪರಿಚಯ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಈ ಕೃತಿಯು ಎಲ್ಲಾ ಭಾಗಗಳ ಕಲಾವಿದರನ್ನು ಪರಿಚಯಿಸುತ್ತದೆ. ಪ್ರಸ್ತುತ ರಂಗಭೂಮಿಯಲ್ಲಿ ಪ್ರಚಲಿತವಿರುವ ಹಿಂದೆ ಸಾಕಷ್ಟು ಕೆಲಸ ಮಾಡಿ ಸಂಧ್ಯಾಕಾಲದಲ್ಲಿರುವ ವಯೋವೃದ್ಧ ಕಲಾವಿದರ ಪರಿಚಯವನ್ನು ಮಾಡುವ ಅಪರೂಪದ ಕೆಲಸವನ್ನು ಈ ಕೃತಿಯ ಮುಖೇನ ಲೇಖಕರು ಮಾಡಿದ್ದಾರೆ.

About the Author

ರಾಜಶೇಖರ ಕದಂಬ
(28 January 1945)

ರಂಗಭೂಮಿ ನಟ, ಸಂಘಟಕ ರಾಜಶೇಖರ ಕದಂಬ ಅವರು ಜನಿಸಿದ್ದು 1945 ಜನವರಿ 28ರಂದು ಬೆಂಗಳೂರಿನ ಗೊಟ್ಟಿಗೆರೆಯಲ್ಲಿ. ತಂದೆ ಕದಂಬರ ದಾಸಪ್ಪ, ತಾಯಿ ವೆಂಕಟಮ್ಮ. ಆಟೋಮೊಬೈಲ್ ತಾಂತ್ರಿಕ ಶಿಕ್ಷಣ ಪಡೆದರು. ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಕದಂಬ ರಂಗವೇದಿಕೆ ಸ್ಥಾಪಿಸಿ, ಹಲವಾರು ನಾಟಕಗಲ್ಲಿ ನಟಿಸಿದ್ದಾರೆ ಹಾಗೂ ನಾಟಕಗಳನ್ನು ನಿರ್ದೇಶೀಸಿದ್ದಾರೆ. ‘ಬಣ್ಣದ ಮುಖಗಳು’, ‘ಬಣ್ಣದ ಬಣ’ ಇವರ ಪ್ರಮುಖ ಕೃತಿಗಳು. ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ಕೆ.ವಿ. ಶಂಕರಗೌಡ ರಂಗಭೂಮಿ ಪ್ರಶಸ್ತಿ, ಚಿತ್ರದುರ್ಗದ ಮುರುಘ ಮಠದ ಕಲಾರತ್ನ ಪ್ರಶಸ್ತಿ, ದೆಹಲಿ ಕನ್ನಡಿಗ ಪ್ರಶಸ್ತಿ, ಹೊಯ್ಸಳ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.  ...

READ MORE

Related Books