ದೀಪಾ ಮಲ್ಲಿಕ

Author : ನೇಮಿಚಂದ್ರ

Pages 48

₹ 32.00

Buy Now


Year of Publication: 2022
Published by: ನವಕರ್ನಾಟಕ ಪಬ್ಲಿಕೇಶನ್‌
Address: ದೇವನಗರ ,ಕೆಂಪೇಗೌಡ ರೋಡ್‌, ಬೆಂಗಳೂರು 560009
Phone: 7353530805

Synopsys

ದೀಪಾ ಮಲ್ಲಿಕ್‌: ವಿಶ್ವಮಾನ್ಯರು ಎಂಬ ಜೀವನಚರಿತ್ರೆ ಪುಸ್ತಕವನ್ನು ಲೇಖಕಿ ನೇಮಿಚಂದ್ರ ಬರೆದಿದ್ದಾರೆ. ದೀಪಾ ಮಲ್ಲಿಕ್ ಉತ್ತಮ ಈಜುಗಾರ್ತಿ, ಮಿಗಿಲಾಗಿ ಬೈಕ್‌ ಎಂದರೆ ಪಂಚಪ್ರಾಣ, ಕ್ರೀಡಾಪಟುವಾಗಬೇಕೆಂದು ನಿರ್ಣಯಿಸಿದುದರ ಜೊತೆಯಲ್ಲಿ ಹಿಮಾಲಯದಲ್ಲಿ ಸಾಹಸ ಕ್ರೀಡೆಗಳಲ್ಲಿ ತೊಡಗಲು ಮನಮಾಡಿದವರು. ಆಗ ಆಕೆಗೆ 36 ವರ್ಷ. ಈ ವಯಸ್ಸಿನಲ್ಲಿ ಕ್ರೀಡಾಪಟುಗಳು ನಿವೃತ್ತಿಯ ಬಗ್ಗೆ ಯೋಚಿಸಿದರೆ, ದೀಪಾ ಕ್ರೀಡಾಲೋಕಕ್ಕೆ ಕಾಲಿರಿಸಲು ನಿಶ್ಚಯಿಸಿದಳು. ನೇಮಿಚಂದ್ರರು ದೀಪಾ ಮಲ್ಲಿಕ್ ಅವರ ಬದುಕು-ಸಾಧನೆಯನ್ನು ಎಷ್ಟು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆಂದರೆ, ಅದು ಓದುಗರಲ್ಲಿ ಎಲ್ಲಿಲ್ಲದ ಸ್ಫೂರ್ತಿಯನ್ನು ತುಂಬುತ್ತದೆ. ಎಲ್ಲ ಅನಾನುಕೂಲತೆಯ ನಡುವೆ ಕೇವಲ ತನ್ನ ಮನೋಶಕ್ತಿಯಿಂದ ಅಂತರರಾಷ್ಟ್ರೀಯ ಖ್ಯಾತಿಗೇರಿದ ದೀಪಾ ಅವರ ಬದುಕು ಮತ್ತು ಸಾಧನೆಯು, ಓದುಗರಲ್ಲಿ ನವ ಉತ್ಸಾಹವನ್ನು ತುಂಬುವಂತಿದೆ. 

About the Author

ನೇಮಿಚಂದ್ರ
(16 July 1959)

ಸ್ತ್ರೀವಾದಿ ಚಿಂತಕಿ, ಸಾಹಿತಿ ನೇಮಿಚಂದ್ರ ಅವರು ಜನಿಸಿದ್ದು 1959 ಜುಲೈ 16ರಂದು ಮೂಲತಃ ಚಿತ್ರದುರ್ಗದವರಾದ ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೀವನುತ್ಸಾಹ ತುಂಬುವಂತಹ ಇವರ ಕೃತಿಗಳೆಂದರೆ ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಒಂದು ಶ್ಯಾಮಲ ಸಂಜೆ, ನೇಮಿಚಂದ್ರರ ಕಥೆಗಳು, ಸಾವೇ ಬರುವುದಿದ್ದರೆ ನಾಳೆ ಬಾ!, ನನ್ನ ಕಥೆ ನಮ್ಮ ಕಥೆ, ಯಾದ್ ವಶೇಮ್, ಮಹಿಳಾ ಅಧ್ಯಯನ, ದುಡಿವ ಹಾದಿಯಲಿ ಜೊತೆಯಾಗಿ, ಬೆಳಗೆರೆ ಜಾನಕಮ್ಮ ಬದುಕು-ಬರಹ, ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು, ಬದುಕು ಬದಲಿಸಬಹುದು, ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ, ಸಂತಸ ನನ್ನೆದೆಯ ಹಾಡು ಹಕ್ಕಿ (ಬದುಕು ಬದಲಿಸಬಹುದು ಭಾಗ -4), ಕಾಲುಹಾದಿಯ ಕೋಲ್ಮಿಂಚುಗಳು- ...

READ MORE

Related Books