ಚಿತ್ರದುರ್ಗ ತಾಲೂಕು ಭರಮಸಾಗರ ಹೋಬಳಿ ನೆಲ್ಲಿಕಟ್ಟೆ ಗ್ರಾಮದಲ್ಲಿ ಸಿದ್ದಪ್ಪ ಮಾರಕ್ಕ ದಂಪತಿಯ ಮಗನಾಗಿ 1972ರ ಮಾರ್ಚ್ 4ರಂದು ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಜನಿಸಿದರು. ಬಿ.ಎ.ಪದವಿಯನ್ನು 7ನೇ ರ್‍ಯಾಂಕ್ ಬಿ.ಇಡಿ.ಪದವಿ ಚಿನ್ನದ ಪದಕ. ಎಂ.ಎ.ಪದವಿ 3ನೇ ರ್‍ಯಾಂಕ್ ಪಡೆದಿದ್ದು, ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿಗಳು-ಒಂದು ಅಧ್ಯಯನ-ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ (2004) ಪಿಎಚ್.ಡಿ.ಪದವಿ ನೀಡಿದೆ. ಬಿಸಿಲು ಮಳೆ. ಛಲಬೇಕು ಶರಣಂಗೆ. ವ್ಯಕ್ತಿತ್ತ ವಿಕಾಸ ಹಾಗೂ ಕನ್ನಡ ಸಾಹಿತ್ಯ. ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿ. ಸಿರಿಗನ್ನಡ ಜಾನಪದ. ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ. ಯುವ ಜನತೆ ಮತ್ತು ದುಶ್ಚಟಗಳು. ಸಿರಿಗನ್ನಡ ಪ್ರಾಚೀನ ಕವಿಗಳು. ಕನಕದಾಸರ ಲೋಕದೃಷ್ಟಿ. ಶ್ರೀ ಗುರು ಕರಿಬಸವೇಶ್ವರಜ್ಜಯ್ಯಸ್ವಾಮಿ ವಚನಾಮೃತ. ಸಂವೇದನೆ. ಅಜಾತ. ಶ್ರೀ ಗುರು. ಮತ್ಯ್ರದ ವಿಸ್ಮಯ ಮಹದೇವಮ್ಮ. ಸಾಹಿತಿ ಸಂಕುಲ ಇವರ ಪ್ರಮುಖ ಕೃತಿಗಳು. ಎಚ್. ನರಸಿಂಹಯ್ಯ ಪ್ರಶಸ್ತಿ. ಸ್ಫೂರ್ತಿ ಶ್ರೀ ಪ್ರಶಸ್ತಿ. ಡಿ.ಎಸ್. ಮ್ಯಾಕ್ಸ್ ಸಾಹಿತ್ಯ ಶ್ರೀ ಪ್ರಶಸ್ತಿ. ಸದ್ಯ ಕುವೆಂಪು ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು.