ಬೆಂಗಳೂರು ಮೂಲದವರಾದ ಲೇಖಕ ಡಿ.ಎಸ್. ಶ್ರೀನಿವಾಸ ಪ್ರಸಾದ್ ಅವರು ಬಾಲ್ಯದಿಂದಲೇ ಬರೆವಣಿಗೆಯಲ್ಲಿ ತೊಡಗಿಕೊಂಡವರು.ತಮ್ಮ 10ನೇ ವಯಸ್ಸಿನಲ್ಲೇ ಬೆಂಗಳೂರು ಆಕಾಶವಾಣಿಯಲ್ಲಿ ಬಾಲಕಲಾವಿದನಾಗಿ `ಒಗ್ಗಟ್ಟಿನಲ್ಲಿ ಬಲವಿದೆ', `ಸಮುದ್ರದಲ್ಲಿ ಆಹಾರ...' ಸೇರಿದಂತೆ 10 ನಾಟಕಗಳಲ್ಲಿ ಅಭಿನಯಿಸಿದ್ದರು.
ಆಚಾರ್ಯ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಇವರು 3 ವರ್ಷದಲ್ಲಿ ಸುಮಾರು 155 ಅಂತರಕಾಲೇಜು ಬಹುಮಾನಗಳನ್ನು ಪಡೆದು ಪ್ರತಿಭಾವಂತ ವಿದ್ಯಾರ್ಥಿ ಪ್ರಶಸ್ತಿಗೆ ಭಾಜನರಾದರು. ಶೇಷಾದ್ರಿಪುರಂ ಕನ್ನಡ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ./ಪದವಿಯನ್ನು ವ್ಯಾಸಂಗ ಮಾಡಿದರು. ಪ್ರಸ್ತುತ ಅವರು ಕನ್ನಡ ಉಪನ್ಯಾಸಕರು.
ಕೃತಿಗಳು: ಸಾಹಿತ್ಯ ಶಿಲ್ಪಿ : ಚಿ ಉದಯಶಂಕರ್ , ಸ್ವರ ರಾಗ ಸುಧಾ : ಸಿನಿಮಾ ಸಂಗೀತದ ಕ್ಲಾಸಿಕಲ್ ಟಚ್.