About the Author

ಚಂದ್ರಭಾಗದೇವಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಬಿ.ಎಸ್ಸಿ ಕೆಮಿಸ್ಟ್ರಿ ಪದವೀಧರರು. ಶಿವರಾಮ ಕಾರಂತರಿಂದ ಫ್ರೀಸ್ಟೈಲ್ ನೃತ್ಯಾಭ್ಯಾಸ ತರಬೇತಿ ಪಡೆದವರು. ಬೆಂಗಳೂರಿನಲ್ಲಿ ‘ಮಹಾಮಾಯಾ’ ನಾಟ್ಯ ತರಗತಿಯನ್ನು ಆರಂಭಿಸಿ, ನೂರಾರು ಶಿಷ್ಯರಿಗೆ ನಾಟ್ಯ ತರಬೇತಿ ನೀಡಿರುತ್ತಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಕರಾಚಿಯಲ್ಲಿ ಇಂಡೋ ಪಾಕಿಸ್ತಾನ್ ಮ್ಯೂಸಿಕ ಕಾನ್ ಫಾರೆನ್ಸ್, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಮಾಡರ್ನ್ ಟ್ರೆಂಡ್ ಇನ್ ಭರತನಾಟ್ಯ, ನ್ಯೂಯಾರ್ಕ್‌ನ ಇಂಡೋ ಅಮೇರಿಕನ್ ಡಾನ್ಸ್ ಕಂಪನಿ, ಲಂಡನ್ನಿನ ಏಪಿಯನ್ ಮ್ಯೂಸಿಕಲ್ ಸರ್ಕಲ್, ಸಿಂಗಪೂರ, ಹವಾಯಿ, ಹಾಂಗ್ ಕಾಂಗ್ ಮುಂತಾದೆಡೆ ಉಪನ್ಯಾಸ, ಪ್ರದರ್ಶನಗಳನ್ನು ನೀಡಿರುತ್ತಾರೆ.

ಕೃತಿಗಳು : ಗೆಜ್ಜೆಯ ಹೆಜ್ಜೆ ನುಡಿ

ಪ್ರಶಸ್ತಿ-ಪುರಸ್ಕಾರಗಳು: ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಕಲಾಭಾರತಿ ಪ್ರಶಸ್ತಿ, ಕಲಾಪ್ರವಾಸ ಯಾತ್ರೆಯ ‘ಗೆಜ್ಜೆಯ ಹೆಜ್ಜೆ ನುಡಿ’ ಪುಸ್ತಕಕ್ಕೆ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ಸರಕಾರದ ಶಾಂತಲಾ ಪ್ರಶಸ್ತಿ, ಕೃಷ್ಣಯ್ಯರ್ ಸ್ಮಾರಕ ಚಿನ್ನದ ಪದಕ ಮುಂತಾದ ಗೌರವ ಪ್ರಶಸ್ತಿಗಳು. ಲಭಿಸಿವೆ. ಅವರು 1997 ಏಪ್ರಿಲ್ 14 ರಂದು ನಿಧನರಾದರು.

 

ಚಂದ್ರಭಾಗದೇವಿ

(11 Aug 1921)