ಲೇಖಕ ರಾಘವೇಂದ್ರ ಜಹಗೀರದಾರ ಅವರು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಾಮನಟಗಿ ಗ್ರಾಮದವರು. ತಂದೆ ಶಾಮರಾವ್ ಜಹಾಗಿರದಾರ್. ತಾಯಿ ರಾಧಾಬಾಯಿ ಶಾಮರಾವ್ ಜಹಾಗಿರದಾರ್. 7ನೇ ತರಗತಿಯವರೆಗೆ ಕಾಮನಟಗಿಯಲ್ಲಿ ಓದಿ ನಂತರ ಕಾಲೇಜು ಶಿಕ್ಷಣ ಪೂರ್ಣಗೊಳಿಸಿದರು. ಸ್ಥಳೀಯವಾಗಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ವರದಿಗಾರರಾಗಿದ್ದು, ನೆಲ-ನೀರು ನಿರ್ವಹಣೆಗೆ ಸಂಬಂಧಿಸಿದಂತೆ ಸ್ವಯಂ ಆಸಕ್ತಿಯಿಂದ ಸಮಾಜ ಸೇವಾನಿರತರಾಗಿದ್ದಾರೆ. ಈ ಭಾಗದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ, ನಾರಾಯಣಪುರ ಆಣೆಕಟ್ಟು, ಕೃಷ್ಣಾ ಜಲಭಾಗ್ಯ ನಿಗಮ, ಕೃಷ್ಣಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಇತ್ಯಾದಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವಾಗ ನೀರು, ಭೂಮಿ, ಕಾಲುವೆ ಕುರಿತಂತೆ ಹಲವಾರು ಲೇಖನಗಳನ್ನು ಬರೆದು ಜಾಗೃತಿ ಮೂಡಿಸಿದ್ದರು.
ಕೃತಿಗಳು: ಸ್ವಾತಂತ್ಯ್ರ ಹೋರಾಟದಲ್ಲಿ ಕರ್ನಾಟಕದ ರಾಜನಕೊಳೂರು
ಪ್ರಶಸ್ತಿ-ಪುರಸ್ಕಾರಗಳು: ಇವರ ಜನಸೇವೆಗೆ ಕರ್ನಾಟಕದ ಸರಕಾರದ ಡಿ.ವಿ.ಜಿ. ಪ್ರಶಸ್ತಿ ಹಾಗೂ ಖ್ಯಾತ ಜಲತಜ್ಞ ಡಾ. ರಾಜೇಂದ್ರಸಿಂಗ್ ಅವರು ಸ್ಥಾಪಿಸಿದ ‘ಪರ್ಯಾವರಣ ಸಂರಕ್ಷಕ:’ ಎಂಬ ಪ್ರಶಸ್ತಿ ಲಭಿಸಿದೆ.