ಸುಮಿತ್ರಾ ಮಾರುತಿ ದುರ್ಗಿ ಅವರು (ಜನನ: 08-09-1970) ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರಹಟ್ಟಿ ಗ್ರಾಮದವರು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಸ್ತಮರಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹಿಂದಿ ಭಾಷಾ ಶಿಕ್ಷಕಿ. ಎಂ.ಎ, ಬಿ.ಇಡಿ, ಹಾಗೂ ಎಂ.ಫಿಲ್ ಪದವೀಧರೆ. ಸದ್ಯ ಬೆಳಗಾವಿಯಲ್ಲೇ ವಾಸಿಸುತ್ತಿದ್ದು, ಕತೆ, ಕವನ ಬರವಣಿಗೆ, ಸಾಹಿತ್ಯ ಓದು ಇವರ ಹವ್ಯಾಸ. ರಾಜ್ಯ ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತರು. ‘ಸ್ವಾತಂತ್ಯ್ರಪೂರ್ವ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರ ಸಾಧನೆ ಹೆಜ್ಜೆಗಳು’-ಇವರ ಸಂಪಾದನಾ ಕೃತಿಯಾಗಿದೆ.