About the Author

ಹಿರಿಯ ಲೇಖಕ ಕೆ. ಕೆಂಪೇಗೌಡ ಅವರು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಶೆಟ್ಟಿಹಳ್ಳಿಯಲ್ಲಿ ಮಾಧ್ಯಮಿಕ ಶಿಕ್ಷಣ, ಚನ್ನಪಟ್ಟಣದಲ್ಲಿ ಹೈಯರ್ ಸೆಕೆಂಡರಿ ಶಿಕ್ಷಣ ಪಡೆದರು. ಮೈಸೂರು ವಿಶ್ವವಿದ್ಯಾಲಯದಿಂದ ಹಿಂದಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ (1961), ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ(1965), ಅವರ ಮುಂದಿನ ಸಂಶೋಧನೆ ಮತ್ತು ಗ್ರಂಥರಚನೆಗೆ ಅನುವಾದವು. A Descriptive Analysis of Irula Dialect’  ವಿಷಯ ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದಿಂದ 1974ರಲ್ಲಿ ಪಿಎಚ್.ಡಿ.ಪದವಿ ಪಡೆದರು.  ಅವರ ‘ಸಾಮಾನ್ಯ ಭಾಷಾ ವಿಜ್ಞಾನ’ ಕೃತಿಗೆ 1995ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಡಿ.ಲಿಟ್.ಪದವಿ ಪಡೆದರು. 1976ರಲ್ಲಿ ‘ಭಾಷಾ ವಿಜ್ಞಾನ ಕೋಶ’,1979 ಹಾಗೂ1980ರಲ್ಲಿ ಕ್ರಮವಾಗಿ ‘ಧ್ವನಿ ವಿಜ್ಞಾನ’, ‘ಧ್ವನಿಮಾ ವಿಜ್ಞಾನ’ 1993 ‘ಸಾಮಾನ್ಯ ಭಾಷಾ ವಿಜ್ಞಾನ’, 1994ರಲ್ಲಿ ’ಕನ್ನಡ ಭಾಷಾ ಚರಿತ್ರೆ’, 1996ರಲ್ಲಿ ‘ತೌಲನಿಕ ದ್ರಾವಿಡ ಭಾಷಾ ವಿಜ್ಞಾನ’, 1997ರಲ್ಲಿ ‘ಕನ್ನಡ ಭಾಷ ಸ್ವರೂಪ’, 2002ರಲ್ಲಿ, ಕನ್ನಡ ಉಪಭಾಷೆಗಳ ಅಧ್ಯಯನ’ ಎಂಬ ಗ್ರಂಥಗಳು ಮಾತ್ರವಲ್ಲದೆ, ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡಕ್ಕೆ, ದ್ರಾವಿಡ ಭಾಷಾ ಪರಿವಾರದವರಿಗೆ ಅವರು ನೀಡಿದ ಕೊಡುಗೆಗಳಾಗಿವೆ.

ಕೆ.ಕೆಂಪೇಗೌಡ

(15 Aug 1939)