About the Author

ಆರ್. ವಸಂತಕುಮಾರ್ ಅವರು ಕಾವ್ಯ, ವಿಮರ್ಶೆ, ಅಂಕಣ ಬರಹ, ಜೀವನಚರಿತ್ರೆ, ವಿಚಾರಸಾಹಿತ್ಯ, ಲಲಿತಪ್ರಬಂಧ ಹಾಗೂ ಸಂಶೋಧನಾ ಬರಹಗಳು ಹೀಗೆ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೃಷಿ ಮಾಡಿರುತ್ತಾರೆ. ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕರು. ಹವ್ಯಾಸಿ ಪತ್ರಕರ್ತರು. ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ’ ಲೋಕ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ವಾರ್ತಾಪತ್ರ’ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ ನುಡಿ’ ಪತ್ರಿಕೆಯ ಸಂಪಾದಕರಾಗಿದ್ದಾರೆ.

ಕೃತಿಗಳು : ತೆರೆಮೆರೆ (2005), ಮನದ ಮಾತು(2009), ಮಂಥನ(2009), ಭಾವನಾ(2011), ಕಡೆಗೋಲು(2013), ಕರ್ನಾಟಕದ ಒಕ್ಕಲಿಗರು(2014), ಡಾ.ಎಂ.ಎಚ್.ಮರಿಗೌಡ(2015), ಜನಮುಖಿ(2015), ಶಕಪುರುಷ ಶಿವರಾಮಕಾರಂತ(2015), ಕಾಯಕಯೋಗಿ ಡಾ. ಎಂ.ಎಚ್.ಎಂ (2015), ಮಣಿದೀಪ(2016), ಸಾಹಿತ್ಯಶೋಧ(2016), ಕನ್ನಡ ಡಿಂಡಿಮ(2017), ಮೌನಸಾಧಕ ಎಂ.ಚಂದ್ರಶೇಖರ್ (2018), ಹಾಗೂ ಇಪ್ಪತ್ತೈದು ಸಂಪಾದಿತ ಕೃತಿಗಳು.

ಪ್ರಶಸ್ತಿ-ಪುರಸ್ಕಾರಗಳು:  ಶ್ರೀ ಭುವನೇಶ್ವರಿ  ಸಾಹಿತ್ಯ ಪ್ರಶಸ್ತಿ, ಆದರ್ಶ ಶಿಕ್ಷಕ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ರಾಜ್ಯಪ್ರಶಸ್ತಿ, ಅಚೀವರ್ಸ್ ಅವಾರ್ಡ್, ಸಾಹಿತಿ ಶ್ರೀ ಹೆಬ್ಬಗೋಡಿ ಗೋಪಾಲ್ ದತ್ತಿ ಪುಸ್ತಕ ಬಹುಮಾನ, ಕುವೆಂಪು ಕನ್ನಡ ಪ್ರಶಸ್ತಿ.ಸೇರಿದಂತೆ ಇತರೆ ಗೌರವಗಳು ಲಭಿಸಿವೆ.

 

ಆರ್. ವಸಂತಕುಮಾರ್