ಪತ್ರಕರ್ತ, ಕನ್ನಡಪರ ಹೋರಾಟಗಾರ, ಬರಹಗಾರರಾಗಿದ್ದ ಮಾ.ನಾ. ಚೌಡಪ್ಪನವರು 1909 ಜುಲೈ 29ರಂದು ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದಲ್ಲಿ ಜನಿಸಿದರು. ತಾಯಿ ಲಕ್ಷ್ಮೀದೇವಮ್ಮ. ತಂದೆ ನಾರಸೀದೇವಯ್ಯ.. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣ, ಮೊದಲು ಮೈಸೂರು ಮತ್ತು ಮದರಾಸು ಆಕಾಶವಾಣಿಗಳಲ್ಲಿ ಉದ್ಘೋಷಕ ಮತ್ತು ವಾರ್ತಾವಿಭಾಗದಲ್ಲಿ ನಂತರ ಉದ್ಯೋಗ,. ಪತ್ರಕರ್ತರಾದರು. ಪತ್ರಿಕೋದ್ಯಮಿ ಬಿ.ಎನ್.ಗುಪ್ತ ಅವರ ಜೊತೆಗೂಡಿ 'ಪ್ರಜಾಮತ' ವಾರಪತ್ರಿಕೆ ಸ್ಥಾಪಿಸಿದರು. ಮೈಸೂರು ಸಂಸ್ಥಾನವು ಈ ಪತ್ರಿಕೆ ನಿಷೇಧಿಸಿದಾಗ ಮುಂಬೈ ಕರ್ನಾಟಕದ ಹುಬ್ಬಳ್ಳಿಗೆ ಹೋಗಿ ಪತ್ರಿಕೆ ಆರಂಭಿಸಿದ ಸಾಹಸಿ. ಬೆಂಗಳೂರು ಆಕಾಶವಾಣಿಯಲ್ಲಿ ಸಹನಿರ್ಮಾಪಕರಾಗಿದ್ದರು.
ನಿವೃತ್ತರಾದ ಮೇಲೆ ‘ಕಾಂಗ್ರೆಸ್ ಪಕ್ಷದ ಕಾಂಗ್ರೆಸ್ ಸಂದೇಶ ಎಂಬ ಪತ್ರಿಕೆ ನಿರ್ವಹಿಸಿದರು. ಪತ್ರಿಕಾ ಖಾರ್ಯದರ್ಶಿಗಳಾಗಿ ಕೆಲಸ ಮಾಡಲು ಮುಖ್ಯಮಂತ್ರಿ ದೇವರಾಜ ಅರಸು ಕರೆದಾಗಲೂ ಅವರು ಆಯ್ಕೆ ಮಾಡಿಕೊಂಡಿದ್ದು, ನಿರಂಜನರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿದ್ದ ಕಿರಿಯರ ವಿಶ್ವಕಥಾಕೋಶ-ಜ್ಞಾನಗಂಗೋತ್ರಿ’ಯ ಕೆಲಸವನ್ನು. ಅದರ ಸಾಹಿತ್ಯ ಸಂಪಾದಕರಾಗಿ ದುಡಿದರು.ರಾಷ್ಟ್ರೋತ್ಥಾನದ ಭಾರತ ಭಾರತಿ ಮಕ್ಕಳ ಪುಸ್ತಕ ಮಾಲಿಕೆಗಾಗಿ ವಿಧುರ, ಸರ್. ಕೆ ಶೇಷಾದ್ರಿ ಅಯ್ಯರ್ ಮತ್ತು ಪಿ. ಕೋದಂಡ ರಾವ್ ಕೃತಿಗಳನ್ನು ಬರೆದರು.
ಮಹಾತ್ಮಗಾಂಧಿಯವರ ‘ಯಂಗ್ ಇಂಡಿಯಾ’ ಮತ್ತು ಹರಿಜನ ಪತ್ರಿಕೆಯ ಲೇಖನಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದು, ಚಲನಚಿತ್ರ ಪತ್ರಿಕೋದ್ಯದ ‘ವಾಕ್ಚಿತ್ರ’ದ ಸಂಪಾದಕರಾಗಿದ್ದರು. ಅವರ ಕಥಾ ಸಂಕಲನ ‘ಕುಂತಿ (ಪಠ್ಯಪುಸ್ತಕವಾಗಿತ್ತು), ಕುಮಾರ ಸಂಭವ, ಚಂದ್ರಗುಪ್ತ, ಶ್ರೀ ಕೃಷ್ಣ ಭೂಪಾಲ ( ಈ ಕಾದಂಬರಿಗೆ ಮೈಸೂರು ಸರ್ಕಾರದ ಪ್ರಶಸ್ತಿ) ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ಇವರ ಶ್ರೀ ಕೃಷ್ಣ ಭೂಪಾಲ ನಾಟಕಕ್ಕೆ ಮೈಸೂರು ರಾಜ್ಯ ಸರ್ಕಾರದ ಪ್ರಶಸ್ತಿ ಸಂದಿದೆ.
ಕನ್ನಡ ಚಲನಚಿತ್ರ ಪತ್ರಿಕೋದ್ಯಮದ ಆದ್ಯಪ್ರವರ್ತಕರಲ್ಲಿ ಒಬ್ಬರಾದ ಚೌಡಪ್ಪನವರನ್ನು ಕನ್ನಡ ವಾಕ್ಚಿತ್ರ ಸುವರ್ಣ ಮಹೋತ್ಸವ, ಭಾರತೀಯ ವಾಕ್ಚಿತ್ರ ಮಹೋತ್ಸವಗಳಲ್ಲಿ ಸನ್ಮಾನಿಸಲಾಯಿತು. 1985ರ ಫೆಬ್ರವರಿ 20ರಂದು ನಿಧನರಾದರು.