ಮೈಸೂರು ರಂಗಾಯಣದಲ್ಲಿ ಕಲಾವಿದರಾಗಿದ್ದ ಮಂಜುನಾಥ ಬೆಳಕೆರೆ ಅವರು ಮೂಲತಹ ದಾವಣಗೆರೆ ಜಿಲ್ಲೆ ಹರಿಹರದವರು. ಮೈಸೂರಿನಲ್ಲಿ ’ಪರಸ್ಪರ' ತಂಡ ಕಟ್ಟಿಕೊಂಡು ಅನೇಕ ನಾಟಕಗಳನ್ನು ನಿರ್ದೇಶಿಸಿದ್ದರು. ಶರೀಫ, ಇದಿತಾಯಿ, ಕಡಲದೋಣಿ, ಓಪನ್ ಕೋಟು, ಅಗ್ನಿಸ್ಪರ್ಶ, ಆಗಮನ 30ಕ್ಕೂ ಅಧಿಕ ನಾಟಕಗಳನ್ನು ಬರೆದಿದ್ದರು. ರಂಗಾಯಣ ಆರಂಭದಿಂದಲೂ ನಟರಾಗಿ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದರು. ಅಲ್ಲದೆ, ನಾಟಕ ನಿರ್ದೇಶಕ, ಸಾಹಿತಿ, ರಂಗಶಿಕ್ಷಕ, ರಂಗಾಯಣದ ರಂಗ ಡಿಪ್ಲೊಮಾದ ಸಂಯೋಜಕ ಪ್ರಾಂಶುಪಾಲರಾಗಿ ದುಡಿದಿದ್ದರು. ಅವರು 2016ರ ಡಿಸೆಂಬರ್ 20ರಂದು ಹೃದಯಾಘಾತದಿಂದ ನಿಧನರಾದರು.