ಲೇಖಕ ನಿಷ್ಠಿ ರುದ್ರಪ್ಪ ಅವರು ಮೂಲತಃ ಬಳ್ಳಾರಿಯವರು. ತಂದೆ ನಿಷ್ಠಿ ಬಸವರಾಜಪ್ಪ, ತಾಯಿ ಪ್ರಭಾವತಿ. ಬಿ.ಕಾಂ, ಎಂ.ಎ, ಬಿ.ಇಡಿ ಪದವೀಧರರು. ಸ್ಮಾತಕೋತ್ತರ ವಚನ ಕಮ್ಮಟ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್, ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು, ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯರು. ಖಾಸಗಿ ಕಂಪನಿಯಲ್ಲಿ ಸೇವೆ, ಬಳ್ಳಾರಿಯ ಲೋಕದರ್ಶನ ಪತ್ರಿಕೆಯಲ್ಲಿ ವರದಿಗಾರರಾಗಿ, ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಾರಿ ಹಾಗೂ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹೊಸಪೇಟೆಯ ಆಕಾಸವಾಣಿ ಕೇಂದ್ರದಿಂದ ‘ಚಿಂತನೆ’ ಹಾಗೂ ಹಚ್ಚೇವು ಕನ್ನಡದ ದೀಪ’ ದೂರದರ್ಶನದಲ್ಲಿ ‘ಬೆಳಗು’ ಕಾರ್ಯಕ್ರಮದಡಿ ಇವರ ಚಿಂತನೆಗಳು ಪ್ರಸಾರವಾಗಿವೆ.
ಕೃತಿಗಳು: ಬಸವಣ್ಣ ಮತ್ತು ಕಾರ್ಲ್ ಮಾಕ್ಸ್ ರ ಮಾನವೀಯ ಹೋರಾಟಗಳು, ಬಸವ ನಿಷ್ಠೆ (ಶರಣ ಸಂಸ್ಕೃತಿ ಚಿಂತನೆಗಳು), ಪಟ್ಟಣ ಮಹಾದೇವಪ್ಪನವರು (ವ್ಯಕ್ತಿ ಚಿತ್ರಣ), ಕನ್ನಡ ತೇರನೆಳೆಯುವವರು, ನಿಷ್ಠಿಯ ನೂರೆಂಟು ವಚನಗಳು (ಈ ಕೃತಿಗೆ ಹಾರೂಗೆರಿಯ ಆಜೂರು ಪುಸ್ತಕ ಪ್ರಶಸ್ತಿ ಲಭಿಸಿದೆ), ಕರತೇಜ ದರ್ಪಣ, Modern Vachanas of Nishti, ಶಾಶ್ವತವೆಂಬ ಭ್ರಮೆಯಲ್ಲಿ, ಬಿರುಬಿಸಿಲೊಳಗಣ ಕನ್ನಡದ ಹಾದಿ, ಶತಾಯುಷಿ ಕಲ್ಲೂರು ನಾಗಮ್ಮನವರು (ವ್ಯಕ್ತಿಚಿತ್ರಣ), ಬುದ್ಧ-ಶರೀಫ (ರಂಗರೂಪಕ), ಶಿಶುನಾಲ ಶರೀಫರ ಪಾರಮಾರ್ಥಿಕ ಚಿಂತನೆ, ಮಂಜುನಾಥ ಗೋವಿಂದವಾಡ (ಜೀವನ ಚಿತ್ರಣ), ಸಂಪಾದಿತ ಕೃತಿಗಳು: ಜಂಗಮ, ಶರಣಾಂಬುಧಿ, ಲೋಹಾದ್ರಿ, ಕಾಯಕ-ದಾಸೋಹ, ನಮ್ಮ ಜನಪದ (ಸ್ಮರಣ ಸಂಚಿಕೆಗಳು), ಬಳ್ಳಾರಿ ಜಿಲ್ಲಾ ಸುವರ್ಣ ಸಂಭ್ರಮದ ಕಥೆಗಳು, ಬಳ್ಳಾರಿಯ ಬೆಡಗು (ಕಥಾ ಸಂಕಲನ), ಅರಳು ಮಲ್ಲಿಗೆ (ಕವನ ಸಂಕಲನ), ಬಳ್ಳಾರಿ ಜಿಲ್ಲಾ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ದರ್ಶನ, ಹೈದ್ರಾಬಾದ್ ಕರ್ನಾಟಕ ಸಂಗೀತ ಕಲೆ (ಆಕರ ಗ್ರಂಥ),
ಪ್ರಶಸ್ತಿ-ಪುರಸ್ಕಾರಗಳು: ಕನ್ನಡದ ಸೇವೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಶ್ರೀ ಪ್ರಶಸ್ತಿ, ಇಳಕಲ್ಲಿನ ಚಿತ್ತರಗಿ ಮಹಾಂತೇಶ್ವರ ಮಠದಿಂದ‘ಬಸವ ಗುರು ಕಾರುಣ್ಯ ಪ್ರಶಸ್ತಿ’, ಡಾ. ಸಿ. ಅಶ್ವತ್ಥ ಕಲಾಬವಳಗದಿಂದ ‘ಕನ್ನಡ ಜಂಗಮ ಪ್ರಶಸ್ತಿ’, ಅಸ್ಪೃಶ್ಯತೆ ನಿವಾರಣೆಗಾಗಿ ದಲಿತ ಸಂಘರ್ಷ ಸಮಿತಿಯಿಂದ ‘ಮಹಾತ್ಮ ಜ್ಯೋತಿ ಬಾ ಫುಲೇ ಪ್ರಶಸ್ತಿ’, ಸಂಗೀತ ಭಾರತಿ ಶಂಕರಾಚಾರ್ಯ ಅಧ್ಯಾತ್ಮ ಬಳಗದಿಂದ‘ ಶಂಕರ ಭಾರ್ಗವ ಪ್ರಶಸ್ತಿ’, ರಾಘವ ಮೆಮೊರಿಯಲ್ ಅಸೋಷಿಯೇಶನ್ ನಿಂದ ಗೌರವ ಸನ್ಮಾನ ...ಹೀಗೆ ವಿವಿಧ ಸಂಘ-ಸಂಸ್ಥೆಗಳು ಇವರನ್ನುಗೌರವಿಸಿವೆ.