ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯುಳ್ಳ ನಾಗಮಣಿ ಎಸ್. ರಾವ್ ಅವರು ಮಹಿಳಾ ಮತ್ತು ಮಕ್ಕಳ ಸಾಹಿತ್ಯ ರಚನೆಯಲ್ಲಿ ಸಕ್ರಿಯರು. ರಾಜ್ಯ ವಿಧಾನಮಂಡಲದ ಕಾರ್ಯ ಕಲಾಪಗಳನ್ನು ವರದಿ ಮಾಡಿದ ಪ್ರಥಮ ಮಹಿಳಾ ಪತ್ರಕರ್ತೆ. 'ಆಕಾಶವಾಣಿ ಪ್ರದೇಶ ಸಮಾಚಾರ'ದ ವಾರ್ತಾವಾಚಕಿ ವಿಧಾನಸಭಾ ಚುನಾವಣೆಯ ಆ್ಯಂಕರ್ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು 1936 ಮೇ 11 ರಂದು ಜನಿಸಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರು ಆಗಿದ್ದ ಅವರು “ಸ್ತ್ರೀಪಥ, ಧೀಮತಿಯರು ಅವರ ಮಹಿಳಾ ಸಾಹಿತ್ಯ, ಏಕಲವ್ಯ ಮಕ್ಕಳ ಸಾಹಿತ್ಯ ರಚನೆಯಾಗಿದೆ. ಸಂವರ್ಧಿನೀ, ಲೇಖ-ಲೋಕ-2, , ಧೀಮಂತ ಪತ್ರಕರ್ತ 'ತಾಯಿನಾಡು' ಪಿ.ಆರ್. ರಾಮಯ್ಯ, ರಂಗಲೇಖಕಿ, ಬಸ್ಸಿನೊಳಗೊಂದು ಪ್ರಜಾಪ್ರಭುತ್ವ ಮತ್ತು ಇತರ ನಾಟಕಗಳು” ಅವರ ಪ್ರಮುಖ ಸಂಪಾದನಾ ಕೃತಿಗಳಾಗಿವೆ. ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಸರ್ಕಾರದ (ಟಿಎಸ್ಸಾರ್) ಪ್ರಶಸ್ತಿ, 'ಆರ್ಯಭಟ ಪ್ರಶಸ್ತಿ, ಸ್ವರ ಲಿಪಿ ಪ್ರತಿಷ್ಠಾನದ ಲಿಪಿಪ್ರಾಜ್ಞೆ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಇತ್ಯಾದಿ ಲಭಿಸಿವೆ.