ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ 1934ರಲ್ಲಿ ಜನಿಸಿದ ಆರ್.ಜಿ. ರಾಯಕರರು, ಮುಂಬಯಿಯ ಸರ್. ಜೆ. ಜೆ. ಕಲಾಶಾಲೆಯ ಪದವೀಧರರು. ಅವರು 35 ವರ್ಷ ಕಲಾ ಅಧ್ಯಾಪಕರಾಗಿ ದುಡಿದು ನಿವೃತ್ತರಾಗಿರುವರು. ರಾಜ್ಯ ಕಲಾಶಿಕ್ಷಣ, ಕಲಾರಂಗಕ್ಕೆ ಚಿರಪರಿಚಿತರು. ಅವರು ನುರಿತ ಲೇಖಕರಾಗಿ, ೯ ಕೃತಿಗಳು ಪ್ರಕಟಗೊಂಡಿವೆ. ಆಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿದ್ದಾರೆ. ಆಕಾಶವಾಣಿಯಿಂದ ಭಾಷಣಗಳು ಬಿತ್ತರಿಸಲ್ಪಟ್ಟಿವೆ. ರಾಜ್ಯದ ಪ್ರಮುಖ ಸಂಗ್ರಹಗಾರರು ಹಾಗೂ ಕಲಾವಿದರ ಬಳಗದಲ್ಲಿ ಚಿರಪರಿಚಿತರು.
1989ರಲ್ಲಿ ರಾಜ್ಯೋತ್ಸವ ಹಾಗೂ 1981ರಲ್ಲಿ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ' ಗಳನ್ನು ನೀಡಿ ಸರಕಾರ ಅವರನ್ನು ಗೌರವಿಸಿದೆ. ಇವರು ಶ್ರೀ ಬಸವರಾಜ ಹಳಿಜೋಳ ಅವರ ಶಿಷ್ಯರಾಗಿದ್ದು, ಅವರನ್ನು ಸಮೀಪದಿಂದ ಬಲ್ಲವರು.