ಲೇಖಕಿ ಲಲಿತಾ ಕೆ. ಆಚಾರ್ ಮೂಲತಃ ಮೈಸೂರಿನವರು. ಅವರು ಮೈಸೂರಿನಲ್ಲಿಯೇ ಕಲಿತು ಮಾನಸಗಂಗೋತ್ರಿಯಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1954ರಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಉಪನ್ಯಾಸಕರಾಗಿ ನೇಮಕಗೊಂಡು, 1990ರಲ್ಲಿ ಮಂಗಳೂರಿಗೆ ವರ್ಗವಾಗಿ ಮಂಗಳೂರಿನಲ್ಲಿ ಸೇವೆ ಸಲ್ಲಿಸಿದರು. ನಂತರ ಪ್ರಾಂಶುಪಾಲರಾಗಿ ಭಡ್ತಿ ಪಡೆದು ಈಗ ನಿವೃತ್ತರಾಗಿದ್ದಾರೆ. ಸಾಹಿತ್ಯದಲ್ಲಿ ಅನುರಕ್ತರಾಗಿರುವ ಅವರ 'ಸುಲಲಿತ ಪಾಕಗಳು' ಎಂಬ ಕೃತಿಯನ್ನು ರಚಿಸಿದ್ದಾರೆ.