ಲೇಖಕ, ಚಿಂತಕ ಕೆ.ಫಣಿರಾಜ್ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಕಂಪ್ಲಿಯವರು. ಕಂಪ್ಲಿಯಲ್ಲಿ 1962ರಲ್ಲಿ ಜನಿಸಿದ ಅವರು ಬಳ್ಳಾರಿ ಜಿಲ್ಲೆ ಹರಪನಹಳ್ಳಿ ಮತ್ತು ಹೊಸಪೇಟೆಗಳಲ್ಲಿ ಪದವಿ ಪೂರ್ವದವರೆಗಿನ ವಿದ್ಯಾಭ್ಯಾಸ. ಗುಲ್ಬರ್ಗ, ಹುಬ್ಬಳ್ಳಿಗಳಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ. ಸ್ನಾತಕೋತ್ತರ ಪದವಿಗಳಿಗಾಗಿ ವಿದ್ಯಾಭ್ಯಾಸ. ಕಳೆದ 25 ವರ್ಷಗಳಿಂದ ಮಣಿಪಾಲದ ಇಂಜನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮೇಷ್ಟ್ರಾಗಿ ಕೆಲಸ ಮಾಡಿತ್ತಿದ್ದಾರೆ. ಮುವತ್ತೈದು ವರ್ಷಗಳಿಂದ ಎಡ ಚಳುವಳಿಗಳ ಒಡನಾಡಿಯಾಗಿದ್ದಾರೆ.
ಕೋಮುವಾದದ ರಾಜಕೀಯ' (ಸಹ ಲೇಖಕ-ಜಿ.ರಾಜಶೇಖರ್, ಫಕೀರ್ ಮಹಮ್ಮದ್ ಕಟ್ಟಾಡಿಯವರೊಂದಿಗೆ), ' ಕೋಮುವಾದದ ಕರಾಳಮುಖಗಳು' (ಸಹಲೇಖಕ-ಎಸ್.ಆರ್.ಭಟ್, ಜಿ.ರಾಜಶೇಖರ್ ಅವರೊಂದಿಗೆ. ಅಂಟೋನಿಯೊ ಗ್ರಾಂಷಿ-ಸಮಾಜವಾದಿ ಚಿಂತಕ, ರಾಜಕಾರಣಿ', 'ಅಂಬೇಡ್ಕರರ ಆಯ್ದ ಬರಹಗಳು' (ಸಂಪಾದನೆ, ಅನುವಾದ), 'ಜಾತಿ ಹಿಂಸೆಯ ರೀತಿ ಬಾಬಾ ಸಾಹೇಬ್ ಅಂಬೇಡ್ಕರರ ಅನುಭವಗಳು' (ಸಂಪಾದನೆ, ಅನುವಾದ) - -ಇವು ಪ್ರಕಟಿತ ಕೃತಿಗಳು, ಹರ್ಷ್ ಮಂದರ್ ಅವರ ಲೇಖನಗಳ ಅನುವಾದ - ಸಂಕಲನ 'ಅಸಮಾನತೆಯ ಬಣ್ಣಗಳು' ಪುಸ್ತಕವನ್ನು ಜಿ.ರಾಜಶೇಖರ್ - ಅವರೊಂದಿಗೆ ಸಂಪಾದನೆ ಮಾಡಿದ್ದಾರೆ. - ಬಿಡಿ ಬರಹಗಳು, ಪದ್ಯಗಳು, ಅನುವಾದಗಳು ಪತ್ರಿಕೆಯೂ ಸೇರಿದ ಹಾಗೆ ಹಲವು ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ.