ವೀರಯ್ಯ ಕೋಗಳಿಮಠ ಅವರು ಜೂನ್ 13, 1972 ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಜನಿಸಿದರು. ತಂದೆ ಸೋಮಯ್ಯ ಮತ್ತು ತಾಯಿ ಶಾಂಭವಿ. ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸ್ವಂತ ಊರಲ್ಲಿ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ತಮ್ಮ ವಿದ್ಯಾಭ್ಯಾಸವನ್ನು ದಾವಣಗೆರೆಯ BDT ಕಾಲೇಜಿನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು, ಮೈಸೂರಿನ ಶ್ರೀ ಜಯ ಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಿಂದ MTech ಪದವಿಯನ್ನು ಹಾಗು ಅಂತರ ರಾಷ್ಟ್ರೀಯ ನಿರ್ವಹಣಾ ಸಂಸ್ಥೆ (IMI) ದೆಹಲಿಯಿಂದ Ex PGDM ಪದವಿ ಪಡೆದಿದ್ದಾರೆ. ಪ್ರಸ್ತುತ ಶ್ರೀಯುತರು ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಯ ವಿಮಾನ ಸಂಶೋಧನೆ ಮತ್ತು ವಿನ್ಯಾಸ ವಿಭಾಗದಲ್ಲಿ (ARDC) ಅನುರಕ್ಷಣಾ ವಿಭಾಗದ ಉಪ ಮಹಾಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ, ಚಲನಚಿತ್ರಗಳು, ಬರವಣಿಗೆ ಮತ್ತು ಸಂಗೀತವು ಜೀವಾಳವಾಗಿದೆ.
ಅನುವಾದಿತ 'ಅನ್ನಾ ಫ್ರಾಂಕ್ ದಿನಚರಿ' ಪ್ರಕಟಿತ ಚೊಚ್ಚಲ ಕೃತಿಯಾಗಿದೆ.