ಸಿ.ಎಸ್. ಅರವಿಂದ ಅವರು ಬೆಂಗಳೂರಿನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಲ್ಲಿ ಪ್ರಾಧ್ಯಾಪಕರು. ಸುಮಾರು 20 ವರ್ಷ ಹಿಂದೆ ರಾಬರ್ಟ್ ಕಾನಿಗೆಲ್ ಎಂಬ ವಿಜ್ಞಾನ ಬರಹಗಾರರು ರಾಮಾನುಜನರ ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ಬರೆದು “The Man Who Knew Infinity : A Life of the Genius Ramanujan” ಶೀರ್ಷಿಕೆಯಡಿ ಪುಸ್ತಕ ಪ್ರಕಟಿಸಿದರು ಕಳೆದ ವರ್ಷದ ಡಿಸೆಂಬರ್ ಮಾಸದಲ್ಲಿ ಸಿ.ಎಸ್. ಅರವಿಂದರು ’ಅನಂತದ ಒಡನಾಟದಲ್ಲಿ’ ಶೀರ್ಷಿಕೆಯಡಿ ಗಣಿತ ತಜ್ಞ ರಾಮಾನುಜಂ ಅವರ ಜೀವನ ಸಾಧನೆಗಳ ಬಗ್ಗೆ ಬರೆದಿದ್ದಾರೆ.
2017 ರಿಂದ ಭಾವನಾ ಎಂಬ ಗಣಿತದ ಆಂಗ್ಲ ನಿಯತಕಾಲಿಕೆಯನ್ನು ಪ್ರಕಟಿಸುತ್ತಿದ್ದು, ಇನ್ನು ಮುಂದೆ ಕನ್ನಡದಲ್ಲೂ ಪ್ರಕಟಿಸುವ ಯೋಜನೆ ಹೊಂದಿದ್ದಾರೆ.