ಜವಾಹರಲಾಲ ನೆಹರು ಜೀವನ ಶೈಲಿ

Author : ಸಂಗಮೇಶ ತಮ್ಮನಗೌಡ್ರ

Pages 96

₹ 40.00




Year of Publication: 2012
Published by: ಸಿದ್ದೇಶ್ವರ ಪ್ರಕಾಶನ
Address: ಹಳೆಯ ಸರಾಫ್ ಬಜಾರ್, ಶ್ರೀ ಜಗದಂಬಾ ದೇವಿ ದೇವಸ್ಥಾನ ಹತ್ತಿರ, ಗದಗ-01
Phone: 9242469965

Synopsys

ಭಾರತದ ಮೊದಲ ಪ್ರಧಾನಿ ಜವಾಹರಲಾಲ ನೆಹರು ಅವರ ಜೀವನ ಚರಿತ್ರೆ ವಿವರಿಸುವ ಕೃತಿಯನ್ನು ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ಬರೆದಿದ್ದಾರೆ. ಪಂಡಿತ ನೆಹರು ವ್ಯಕ್ತಿ-ಶಕ್ತಿ, ಕಲೆ-ಸಂಸ್ಕೃತಿ-ಸಾಹಿತ್ಯ ಮತ್ತು ನೆಹರು ವಾಸ್ತವಿಕತೆ, ನೆಹರು ರಾಜಕೀಯ ಸಿದ್ಧಾಂತ, ಗಾಂಧೀಜಿ-ನೆಹರು ಸಂಬಂಧ- ದೃಷ್ಟಿ, ನೆಹರು-ಸಮಾಜವಾದಿ ನಿಲುವು, ನೆಹರು ಮೇಲೆ ಗಾಂಧೀಜಿಯ ಪ್ರಭಾವ, ಗಾಂಧೀಜಿ-ನೆಹರು ಜೈಲು ವಾಸ, ಗಾಂಧೀಜಿ-ನೆಹರು ಭಿನ್ನಾಭಿಪ್ರಾಯಗಳು, ಹಿಂದೂ-ಮುಸ್ಲಿಂ ಹಿಂಸೆ: ಗಾಂಧೀಜಿ-ನೆಹರು ಚಿಂತನೆ, ನೆಹರು ಹಾಸ್ಯಪ್ರಜ್ಷೆ-ಪ್ರಕೃತಿಪ್ರೇಮ, ನೆಹರು ಕೊನೆಯ ದಿನಗಳು ಹೀಗೆ ವಿವಿಧ ಶೀರ್ಷಿಕೆಗಳಡಿ ನೆಹರು ಅವರ ವ್ಯಕ್ತಿತ್ವದ ಹತ್ತು ಹಲವು ಮಗ್ಗಲುಗಳನ್ನು ಪರಿಚಯಿಸಿದ್ದಾರೆ.

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Related Books