ಯುದ್ಧ ಮತ್ತು ಶಾಂತಿ ಭಾಗ-2

Author : ಓ. ಎಲ್. ನಾಗಭೂಷಣಸ್ವಾಮಿ

Pages 1012

₹ 250.00




Year of Publication: 2010

Synopsys

ವಿಶ್ವದ ಪ್ರಮುಖ ಕಾದಂಬರಿಗಳಲ್ಲಿ ಒಂದಾದ ಲಿಯೋ ಟಾಲ್ಸ್ಟಾಯ್ ಅವರ ’ವಾರ್ ಅಂಡ್ ಪೀಸ” ನ ಕನ್ನಡ ಅನುವಾದದ ಎರಡನೇ ಭಾಗ ಇದು. ಹಲವಾರು ಇಂಗ್ಲಿಷ್ ಅನುವಾದಗಳನ್ನು ಪರಿಶೀಲಿಸಿ, ಸಿದ್ಧಪಡಿಸಿರುವ ಈ ಅನುವಾದ ಟಾಲ್ಸ್ಟಾಯ್ ಅವರಿಗೆ ಸಂಬಂಧಿಸಿದ ಕೆಲವು ವಿಶೇಷ ವಿಚಾರಗಳನ್ನು, ವಿವರಗಳನ್ನು ಒದಗಿಸುತ್ತದೆ. ವಿಸ್ತಾರವಾದ ಹರಹನ್ನು, ಐದುನೂರಕ್ಕೂ ಹೆಚ್ಚು ಪಾತ್ರಗಳನ್ನು ಉಳ್ಳ ಕಾದಂಬರಿ, ರಷ್ಯನ್ ಬದುಕನ್ನು ಬದಲಿಸಿದ ಮೂರು ಯುದ್ಧಗಳ ಕುರಿತ ವಿವರಗಳನ್ನು ಕೂಡ ಒದಗಿಸುತ್ತದೆ.

ಹಿರಿಯ ವಿಮರ್ಶಕ ಓ.ಎಲ್‌. ನಾಗಭೂಷಣಸ್ವಾಮಿ ಇದನ್ನು ಕನ್ನಡಕ್ಕೆ ತಂದಿದ್ದಾರೆ. 

About the Author

ಓ. ಎಲ್. ನಾಗಭೂಷಣಸ್ವಾಮಿ
(22 September 1953)

ಓ ಎಲ್ ನಾಗಭೂಷಣ ಸ್ವಾಮಿ- ಹುಟ್ಟಿದ್ದು22 ಸೆಪ್ಟೆಂಬರ್ 1953,  ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಇಂಗ್ಲಿಷ್  (1873) , ಎಂ.ಎ. ಕನ್ನಡ(1975)ಪದವಿ, ಎಂಡಿಟಿಡಿಬಿ ಕಾಲೇಜು ಮೈಸೂರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ,  ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆನೇಕಲ್. ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಸೇವೆ (1992-1998).  ಜನವರಿ2005 ರಲ್ಲಿ ಉದ್ಯೋಗದಿಂದ ಸ್ವಯಂ ನಿವೃತ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ವಿಶ್ವವಿದ್ಯಾನಿಲಯ ಕೆ. ಕೆ. ಬಿರ್ಲಾ ಫೌಂಡೇಷನ್, ಜೆ. ಕೃಷ್ಣಮೂರ್ತಿ ಪೌಂಡೇಷನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಲವು ಮಹತ್ವದ ...

READ MORE

Related Books