`ಷಹೀನ್ ' ಎಂಬುದು ತೆಲುಗು ಮೂಲದ ರವಿಕಿರಣ್ ಅವರು ಮಕ್ಕಳಿಗಾಗಿ ಬರೆದ ಕಾದಂಬರಿ. ಲೇಖಕ ಧನಪಾಲ ನಾಗರಾಜಪ್ಪ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ತೆಲುಗು ಅಸೋಷಿಯೇಷನ್ ಆಫ್ ನಾರ್ತ್ ಅಮೆರಿಕ ಸಂಸ್ಥೆಯಿಂದ ಈ ಕೃತಿಗೆ ಮಕ್ಕಳ ಉತ್ತಮ ಪುಸ್ತಕ ಪ್ರಶಸ್ತಿ ಲಭಿಸಿದೆ.
ತೈಲಬಾವಿಗಳ ಅಧಿಪತ್ಯ ವಿರುವ ದೇಶಗಳ ಮೇಲೆ ರಷ್ಯಾ ಹಾಗೂ ಅಮೆರಿಕದಂತಹ ದೇಶಗಳು ತಮ್ಮ ಪ್ರಭುತ್ವ ಸಾಧಿಸಲು ಹೆಣಗುತ್ತಿರುವ ಸನ್ನಿವೇಶದಿಂದ ಪಾರಾಗಬೇಕು. ಯಜಮಾನ ಸಂಸ್ಕೃತಿಯ ಇಂತಹ ದೇಶಗಳ ವಿರುದ್ಧ ಜಾಗೃತಿಯಾದರೆ ಮಾತ್ರ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೂ ಯಾವುದೇ ಸಂಚಕಾರ ಬಾರದು. ಇಂತಹ ಜಾಗೃತಿಯನ್ನು ಹದಿನಾಲ್ಕು ವರ್ಷದ ಅನಾಥೆ ಬಾಲೆಯ ಮೂಲಕ ಸಾಕಾರಗೊಳಿಸುವ ಆಶಯ ಈ ಕಾದಂಬರಿಯದ್ದು.
ಧನಪಾಲ ನಾಗರಾಜಪ್ಪನವರು ಅನುವಾದಕರಾಗಿ ಚಿರಪರಿಚಿತರು. ನಾಗರಾಜಪ್ಪ ಹಾಗೂ ರಾಮಚಂದ್ರಮ್ಮ ದಂಪತಿಯ ಮಗನಾಗಿ 20-06-1987 ರಂದು ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿ. ಜನಿಸಿದರು. ಭಾರತೀಯ ವಾಯು ಸೈನ್ಯದಲ್ಲಿ PBOR ಶ್ರೇಣಿಯಲ್ಲಿ ಕಳೆದ 15 ವರ್ಷಗಳಿಂದ ಏರ್ ಮೆನ್ ಆಗಿ ವೈದ್ಯಕೀಯ ಸಹಾಯಕನ ವೃತ್ತಿ. ಕಳೆದ 15 ವರ್ಷಗಳಿಂದ ಸಾಹಿತ್ಯಿಕ ಕೃಷಿಯಲ್ಲಿ ನಿರತನಾಗಿದ್ದು ಸ್ವ ರಚನೆ, ಸಂಪಾದನೆ, ಪ್ರಕಾಶನ ಮತ್ತು ಅನುವಾದದ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ನಿವೇದನೆ (ಕವನ ಸಂಕಲನ), ಮಿತ್ರವಾಣಿ (ಪ್ರಧಾನ ಸಂಪಾದಕತ್ವದ ಕವನ ಸಂಕಲನ), ಕಾಡುವ ಕಥೆಗಳು (ಅನುವಾದಿತ ಕಥಾ ಸಂಕಲನ, ತೆಲುಗು ಮೂಲ : ಸಲೀಂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು), ತಣ್ಣೀರ ...
READ MORE