ಹಿಮಾಗ್ನಿ

Author : ರವಿ ಬೆಳಗೆರೆ

Pages 252

₹ 350.00




Published by: ಭಾವನಾ ಪ್ರಕಾಶನ
Address: ನಂ. 2, 80 ಫೀಟ್ ರಸ್ತೆ, ಕದಿರೇನಹಳ್ಳಿ ಪೆಟ್ರೋಲ್ ಪಂಪ್ ಹತ್ತಿರ, ಬನಶಂಕರಿ 2ನೇ ಹಂತ ಬೆಂಗಳೂರು-560070
Phone: 080- 2679 0804

Synopsys

ಕೌಂಟರ್ ಟೆರರಿಸಂ ಕುರಿತಾಗಿ ಕನ್ನಡದಲ್ಲಿ ಬರೆದಿರುವಂತಹ ಸಾಹಿತ್ಯ ಬಹಳ ವಿರಳ. ಕೌಂಟರ್ ಟೆರರಿಸಂನ ಉದ್ದ ಅಗಲಗಳ ಕುರಿತು ಬರೆದಂತಹ ಕಾದಂಬರಿ ಹಿಮಾಗ್ನಿ. ಮುಂಬೈನಲ್ಲಿ ನಡೆದಂತಹ ಭಯೋತ್ಪಾದಕ ದಾಳಿಯನ್ನು ಕೇಂದ್ರವಾಗಿಟ್ಟುಕೊಂಡು ಬರೆದಂತಹ ಕಾದಂಬರಿ ಇದು. ಇಸ್ರೇಲ್‍ ಯಾವ ರೀತಿ ತಮ್ಮ ವಿರುದ್ಧ ನಡೆದ ದಾಳಿಗಳ ಪ್ರತಿಕಾರ ತೀರಿಸಿಕೊಂಡಿತು ಎಂಬುದರ ವಿವರಣೆಯೂ ಈ ಪುಸ್ತಕದಲ್ಲಿ ಅಡಗಿದೆ. ಭಾರತದ ಬೇಹುಗಾರಿಕಾ ಸಂಸ್ಥೆಯಾದ ‘ರಾ’ ಯಾವ ರೀತಿ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತದೆ ಎಂಬುದರ ಕುರಿತು ಓದುಗರಿಗೆ ಈ ಕಾದಂಬರಿಯ ಮೂಲಕ ಲೇಖಕರು ತಿಳಿಸುತ್ತಾರೆ. ಬೇಹುಗಾರರಾಗಿ ಪ್ರಪಂಚದ ಮೂಲೆ ಮೂಲೆಯಲ್ಲಿ ವಾಸಿಸುವ ರಾ ಸಂಸ್ಥೆಯ ಏಜೆಂಟರ ಜೀವನ, ಅವರಿಗಿರುವ ಪ್ರಾಣಾಪಾಯಗಳ ಕುರಿತು ಈ ಕಾದಂಬರಿ ಅರಿವನ್ನು ಮೂಡಿಸುತ್ತದೆ. ಕಥೆಯ ಪ್ರಮುಖ ಪಾತ್ರವಾಗಿರುವ ಕರ್ನಲ್ ರವೀಂದ್ರ ಮೂಲಕ ಬೇಹುಗಾರರ ಕುಟುಂಬದ ವ್ಯಥೆಗಳೇನು ಎಂಬ ವಿಷಯವನ್ನು ಕೂಡ ಓದುಗರಿಗೆ ತಿಳಿಸುತ್ತಾರೆ ಬೆಳಗೆರೆಯವರು. ವಿದೇಶಿ ಪರಿಸರದ ಸುಂದರವಾದ ವರ್ಣನೆ, ಅಲ್ಲಿನ ಸ್ಥಿತಿಗತಿ ಮತ್ತು ವಿದೇಶಿ ಮಾಫೀಯಗಳ ಕುರಿತು ಕಣ್ಣಿಗೆ ಕಟ್ಟುವಂತಹ ವಿವರಣೆಯನ್ನು ಹೊಂದಿರುವಂತಹ ಕಾದಂಬರಿ ಹಿಮಾಗ್ನಿ.

About the Author

ರವಿ ಬೆಳಗೆರೆ
(15 March 1958 - 13 November 2020)

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...

READ MORE

Related Books