‘ಮರಳಿ ಮನೆಗೆʼ ಕೃತಿಯು ಹೆಚ್ಚಿನ ಓದಿನ ಬಗ್ಗೆ ಆಸಕ್ತಿ ಹೊಂದಿದ್ದರೂ, ಉನ್ನತ ಶಿಕ್ಷಣಕ್ಕಾಗಿ ದಟ್ಟಾರಣ್ಯದ ಕಾಲುಹಾದಿಯಲ್ಲಿ ನಡೆದು ದೂರದ ಊರಿನಲ್ಲಿ ಇರುವ ಶಾಲೆಗೆ ಹೋಗಿಬರಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿದ್ದ ಬಾಲಕನ ಕಥೆಯನ್ನು ಹೇಳುತ್ತದೆ. ಈ ಅನಿವಾರ್ಯತೆಯಿಂದಾಗಿ ಓದನ್ನು ಮೊಟಕುಗೊಳಿಸಿ, ತನ್ನ ಅಣ್ಣನಂತೆ ತಾನೂ ದುಡಿಮೆಗಾಗಿ ದೂರದ ಊರಿಗೆ ವಲಸೆ ಹೋಗುವ ಅನಿವಾರ್ಯತೆಯು ಈ ಬಾಲಕನನ್ನು ಕಂಗೆಡೆಸುತ್ತದೆ. ಈ ಸಂದರ್ಭದಲ್ಲಿ ಆತನ ಮನಸ್ಸಿನಲ್ಲಿ ʻನಾವು ನಮ್ಮದೇ ಶಾಲೆ ಆರಂಭಿಸಿದರೆ ಹೇಗೆ?ʼ ಎಂಬ ಪ್ರಶ್ನೆ ಮೂಡುತ್ತದೆ. ಈ ಪ್ರಶ್ನೆಗೆ ಆ ಬಾಲಕ ಕಂಡುಕೊಳ್ಳುವ ಪರಿಹಾರವೇ ಈ ಪುಸ್ತಕದ ತಿರುಳು. ತಾವು ಪ್ರೀತಿಸುವ ಜನರನ್ನು ಮತ್ತೆ ತಮ್ಮ ತವರಿಗೆ ಕರೆತರುವ ನಿಟ್ಟಿನಲ್ಲಿ ಇರುವ ಅವಕಾಶಗಳನ್ನು ಶೋಧಿಸುತ್ತಿರುವ ಸಮರ್ಪಣಾ ಮನೋಭಾವದ, ಬುದ್ಧಿವತ ಹಾಗೂ ಮಹತ್ವಾಕಾಂಕ್ಷೆಯ ಮಕ್ಕಳು ನೆಲೆಸಿರುವ ಧರ್ಮಪುರಿಯ ನಯನಮನೋಹರ ಸಿತ್ತಿಲಿಂಗಿ ಕಣಿವೆಯ ಕಥಾಲೋಕಕ್ಕೆ ಈ ಕೃತಿ ನಮ್ಮನ್ನು ಕೊಂಡೊಯ್ಯುತ್ತದೆ.
©2024 Book Brahma Private Limited.