ವಸುದೈವ ಕುಟುಂಬ ಎಂಬುದು ಸಾಯಿಸುತೆ ಅವರ ೧೨೫ ನೇ ಕಾದಂಬರಿಯಾಗಿದೆ.ಈ ಕಾದಂಬರಿಯಲ್ಲಿ ರವಿಕರ ಮತ್ತು ಶಾರದಳೇ ನಾಯಕ ಮತ್ತು ನಾಯಕಿ… ಹಿರಿಯರಲ್ಲಿ ಗೌರವ, ಕುಟುಂಬದ ಸದಸ್ಯರ ಮೇಲೆ ಅಪಾರ ಪ್ರೀತಿ, ಜಾಣ್ಮೆಯಿಂದ ಸಮಸ್ಯೆಯನ್ನು ಬಗೆಹರಿಸುವ ರೀತಿ… ಇವೆಲ್ಲವೂ ಈ ಕಾದಂಬರಿಯಲ್ಲಿ ಮೂಡಿಬಂದಿವೆ.ಪ್ರತಿಯೊಬ್ಬ ಗಂಡಿನ ಯಶಸ್ಸಿನ ಹಿಂದೆ ಒಬ್ಬ ಹೆಣ್ಣಿರುತ್ತಾಳೆ ಎಂಬುದು ನಾಣ್ಣುಡಿ… ಹಾಗೆಯೇ ಹಲವು ಮಹಿಳೆಯರ ಯಶಸ್ಸಿಗೆ ಅವರವರ ಗಂಡಂದಿರು ಕೂಡ ಕಾರಣವಾಗಿರುತ್ತಾರೆ. ಹಾಗೆಯೇ ನಮ್ಮ ಸಾಯಿಸುತೆ ಅಮ್ಮನವರಿಗೆ ಅವರ ಪತಿಯವರಾದ ಅಶ್ವತ್ ನಾರಾಯಣ್ ಸರ್ ರವರು ಬೆಂಬಲ ಮತ್ತು ಪ್ರೋತ್ಸಾಹವನ್ನು ಕೊಟ್ಟು ಅಮ್ಮನವರ ಯಶಸ್ಸಿಗೆ ಪ್ರಮುಖ ಕಾರಣವಾಗಿದ್ದಾರೆ…. ವಸುದೈವ ಕುಟುಂಬ ಈ ಕಾದಂಬರಿಯ ಮುನ್ನುಡಿಯನ್ನು ಓದುವಾಗ ಅವು ಕಾಣಸಿಗುತ್ತವೆ. ಹೆಂಡತಿಗೆ ಪ್ರೋತ್ಸಾಹ ನೀಡುವ ಗಂಡಂದಿರು ಹೀಗೆಯೇ ತಮಗೆ ಸ್ವತಂತ್ರಬೇಕು.. ಯಾರ ಹಂಗು ಬೇಡ ಎಂದು ಅವನ್ನ ನಿರಾಕರಿಸುವ ಅಂಕಿತಾ ಮತ್ತು ದಿನಕರ… ಹಿರಿಯಣ್ಣನಿಂದ ಹಿಡಿದು ಪುಟ್ಟ ಪುಟಾಣಿಗಳವರೆಗೂ ದಿನಕರನ ಒಳಿತನ್ನು ಬಯಸುವ ಸಹೃದಯರುಳ್ಳ ವ್ಯಕ್ತಿ.ಕುಟುಂಬವನ್ನು ಯಾವುದೇ ಮುಲಾಜಿಲ್ಲದೇ ತನ್ನ ಮತ್ತು ದಿನಕರ ಲೈಫಿನಿಂದ ಕಿತ್ತೆಸೆದ ಪುಣ್ಯವತಿ ಅಂಕಿತಾ…. ಮದುವೆಗೂ ಸಹ ಅವರ್ಯಾರು ಬರಬೇಕಿಲ್ಲ ಎಂದಾಗ ಓದುಗರಿಗೆ ಹೃದಯ ಜಲ್ಲೆನ್ನುತ್ತೇ.ಮತ್ತು ಓದುಗರಿಗೆ ಆಶ್ಚರ್ಯ , ಕುತೂಹಲತೆಯನ್ನು ಮೂಡಿಸುತ್ತವೆ. ಕುಟುಂಬದ ಒಟ್ಟು ಚಿತ್ರಣವು ವಸುಧೈವ ಎಂಬ ಕಾದಂಬರಿಯಲ್ಲಿ ಅಡಕವಾಗಿದೆ.ಸ್ವಾರ್ಥತೆ ಪಿಡುಗಿನಿಂದ ದಿನಕರ ತನ್ನ ಬಾಳನ್ನೇ ನಾಶಗೊಳಿಸಿ ಕೊಂಡ ಬಗೆಯು ಈ ಕಾದಂಬರಿಯಲ್ಲಿ ಮೂಡಿಬಂದಿದೆ.
©2024 Book Brahma Private Limited.