ಅಮಲು, ಕತ್ತಲೊಳಗೆ, ಅಪರಿಚಿತರು ಎಂಬ ಮೂರು ಕಾದಂಬರಿಗಳ ಗುಚ್ಛ .
1979ರಲ್ಲಿಯೇ ರಚಿಸಲಾಗಿ ’ಅಮಲು’ ಕಾದಂಬರಿ 1990 ರ ಜುಲೈ 'ಇದು ಉಷಾ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದು ಕ್ಷಿತಿಜ ಅವರ ನಾಲ್ಕನೇ ಕಾದಂಬರಿ. ಯೌವನದ ಅಮಲಿನಲ್ಲಿ ನಡೆಸುವ ವ್ಯವಹಾರವು ಎದುರಾಗುವ ಹೀನ ಸಂಬಂಧದ ಬಗ್ಗೆ ಚಿತ್ರಿಸುತ್ತದೆ. ವೈದ್ಯಕೀಯ ಸಮಸ್ಯೆಯನ್ನು ಮನೋವೈಜ್ಞಾನಿಕವಾಗಿ ವಿಶ್ಲೇಷಿಸಿರುವುದು ಇದರ ವಿಶೇಷ. 1995 ರಲ್ಲಿ ಬರೆದ 'ಕತ್ತಲೊಳಗೆ' ಕಾದಂಬರಿ ನವೆಂಬರ್ 2003೩ ರ ನವರಾಗಸಂಗಮ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಒಂದು ತರಬೇತಿ ಶಾಲೆಯಲ್ಲಿ ಅದರ ಮುಖ್ಯಸ್ಥ ನಿಯಮಗಳನ್ನು ಗಾಳಿಗೆ ತೂರಿ ವೈಯಕ್ತಿಕ ಮಟ್ಟದಲ್ಲಿ ವ್ಯವಹರಿಸುವ ಪರಿಯನ್ನು ಪ್ರಾಮಾಣಿಕ ನೌಕರನೊಬ್ಬನ ಹಿನ್ನೆಲೆಯಲ್ಲಿ ಚಿತ್ರಿತವಾಗಿದೆ. 1979 ರಲ್ಲಿ ಬರೆದ ‘ಅಪರಿಚಿತರು’ ಧಾರಾವಾಹಿಯಾಗಿ ಚಂದನ (1996) ಮತ್ತು ಪ್ರಜಾರಂಗ (2002) ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದು ಆಚಾರ್ಯ ರಜನೀಶ್ ರ 'From sex to superconscious' ಪುಸ್ತಕದ ಭಾವಾನುವಾದ. ಪೂನಾ ಆಶ್ರಮದ ಅನುಮತಿ ದೊರೆಯದ್ದರಿಂದ ಕತೆಯಾಗಿ ರೂಪಿಸಲಾಗಿದೆ.
©2024 Book Brahma Private Limited.