ಮಾರ್ಗರೆಟ್ ಮಿಶಲ್ ಅವರ ಇಂಗ್ಲಿಷ್ ಕಾದಂಬರಿಯ ಕನ್ನಡಾನುವಾದ ಕೃತಿ. ಗಾನ್ ವಿತ್ ದ ವಿಂಡ್ ಹತ್ತೊಂಬತ್ತನೇ ಶತಮಾನದ ಮಧ್ಯಕಾಲದಲ್ಲಿ ಅಮೆರಿಕಾದ ದಕ್ಷಿಣ ಸಂಸ್ಥಾನಗಳಿಂದ ಜೀತಪದ್ಧತಿಯನ್ನು ತೊಲಗಿಸುವ ಪಣತೊಟ್ಟ ಅಮೆರಿಕಾಧ್ಯಕ್ಷ ಅಬ್ರಹಾಂ ಲಿಂಕನ್‌ರ ಪ್ರಯತ್ನಕ್ಕೆದುರಾಗಿ, ಸಂಘಟಿತವಾಗಿ ಎದ್ದುನಿಂತ ದಕ್ಷಿಣದ ಹದಿಮೂರು ಪ್ರಾಂತ್ಯಗಳ “ಸಂಘಟನೆಯ' ಧೈಯ, ಸಾಧನೆಯು, ಯುದ್ದದ ಬೀಸುಗಾಳಿಗೆ ಸಿಲುಕಿ ಮೂರಾಬಟ್ಟೆಯಾಗುವ ಕಥಾನಕ “ಗಾನ್ ವಿತ್ ದ ವಿಂಡ್”ನ ಆರಂಭ, ಪ್ರಬಲವಾದ ಈ ಸುಳಿಗಾಳಿಗೀಡಾದ ಆ ದಕ್ಷಿಣನಾಡ ಜೀವಚೈತನ್ಯದ ಪ್ರತೀಕವೇ ಆದ ಸ್ಕಾರ್ಲೆಟಳ ಚಿತ್ರಣದೊಂದಿಗೆ ಕಾದಂಬರಿ ತೆರೆದುಕೊಳ್ಳುತ್ತದೆ. 'ಯಾಂಕಿ'ಗಳೆಂದು ದಕ್ಷಿಣೀಯರಿಂದ ಕರೆಯಲ್ಪಡುವ ಉತ್ತರ ಅಮೆರಿಕಾದವರಾದ ಯೋಧರ ದಾಳಿಗೆ 'ಸಂಘಟನಾ ಸೇನೆ” ಧೂಳೀಪಟವಾಗುತ್ತದೆ.
ಪತನವಾದ ಸಂಘಟನೆಯ ಸೇನೆಯಂತೆಯೇ ಯುದ್ದದ ಬೀಸುಗಾಳಿಗೆ ಧೂಳೀಪಟವಾಗಿ ಹೋದ ಕೌಂಟಿಯ ಕೃಷಿಭೂಮಿ; ಸೌಧಗಳು; ಆ ನಾಗರಿಕತೆ; ನೆಲೆತಪ್ಪಿ ಪಟ್ಟಣ ಸೇರಿ ಯಾಂಕಿಗಳ ಅಮಿಷದಿಂದ ಸ್ವತಂತ್ರರಾಗಿಳಿಸಿ ದುರಳರಾದ ಕರಿಯರು; ಮುದುಕರನ್ನೂ, ಅಂಗವಿಕರನ್ನು ಹೊರತುಪಡಿಸಿ ಬೇರೆ ಪುರುಷರೇ ಇಲ್ಲದ ತನ್ನೂರಿನಲ್ಲಿ, ಕಣನಿರ್ಧಾರದ ಹಟದಿಂದ ಹದಿನಾರರ ವಯಸ್ಸಿಗೆ ತಾಯಿಯೂ, ವಿಧವೆಯೂ ಆಗಿ ಉಳಿದ ಸ್ಕಾರ್ಲೆಟ್; ಚೇತರಿಕೆಗಾಗಿ ಕಾಲಿರಿಸಿದ ಪತಿ ಚಾರ್ಲ್ಸ್ನ ಮನೆಯಾದ ಅಟ್ಲಾಂಟಾ ನಗರಿ; ಯುದ್ಧದಿಂದ ಪತನಗೊಂಡಿದ್ದರೂ, ತನ್ನಂತೆ ಹೊಸದನ್ನು ಮೇಳವಿಸಿಕೊಂಡು ಪುನರುಜ್ಜಿವಿತಗೊಂಡ ಅಟ್ಲಾಂಟಾ ರೈಲುದಾರಿ, ಕಾರ್ಖಾನೆಗಳೊಂದಿಗೆ ಬೆಳೆದು ನಿಂತ ರೀತಿ; ಅಲ್ಲಿ ನಯವಂತಿಕೆ, ಥಳಕು, ಬಳುಕಿನೊಂದಿಗೆ ಹೊಸ ನಾಗರಿಕರಾಗಿ ಬಂದ ಯಾಂಕೀ ಕುಟುಂಬಗಳು; ಭೂಮಿ ಕಬಳಿಸಲು ಬಂದ ಅವಕಾಶದ ಲಾಭಕೋರರು, ಮರೆಯಲ್ಲಿ ಈ ಸಮಾಜದಲ್ಲಿ ನಡೆದ ಕು ಕ್ಲಶ್ ಕಾನ್ ಚಳವಳಿ; ದಾರಿ ತಪ್ಪಿ ಅಂಕೆ ಮೀರಿದ ಕರಿಯರಿಂದ, ಅವರನ್ನು ಎತ್ತಿ ನಿಲ್ಲಿಸಿ, ತಮ್ಮನ್ನು ದಮನಿಸುವ ಬಿಳಿಯರಿಂದ ರಕ್ಷಿಸಿಕೊಳ್ಳುವ ಈ ಯತ್ನದಲ್ಲಿ ಪತ್ನಿಯ ಮಹತ್ವಾಕಾಂಕ್ಷೆಗೆ ತಾನೇ ಬಲಿಯಾದ ಫ್ರಾಂಕ್; ಆಷ್ಲಿಯು ತನ್ನ ಕಲ್ಪಿತ ಪ್ರೇಮವಷ್ಟೇ ಎಂದೂ, ರೈಟ್ ತನ್ನನ್ನು ಆರಾಧಿಸುವಂತೆ ಪ್ರೀತಿಸಿದ್ದನೆಂಬುದನ್ನು ಅರಿತು, ಮರಳಿ ಅವನನ್ನು ಪಡೆಯಬಯಸಿ ವಿಫಲಳಾಗಿ, ಸೋಲು ತನ್ನ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸಿದರೂ, ಸೋಲರಿಯದ ತನ್ನ ಜನರ ಛಲದಿಂದಾಗಿ “ನಾಳೆ ಇನ್ನೂ ಕಾದಿದೆ” ಎಂದುಕೊಂಡು ವಿಶ್ವಾಸ ತಾಳುವ ಸ್ಕಾರ್ಲೆಟ್-ಲೇಖಕಿ ಮಾರ್ಗರೆಟ್ ಮಿಶೆಲ್-ಜಗತ್ತಿಗೇ ನೀಡಿದ ಭರವಸೆಯ ಸಂಕೇತ.
©2025 Book Brahma Private Limited.