‘ವಾರಾಣಸಿ’ ಕೆ. ಎಸ್. ಕರುಣಾಕರನ್ ಅವರ ರಚನೆಯ ಕಾದಂಬರಿಯಾಗಿದೆ. ಮಲಯಾಳ ಸಾಹಿತ್ಯದಲ್ಲಿ ಜ್ಞಾನಪೀಠ ಪುರಸ್ಕೃತ ಲೇಖಕ ಎಂ. ಟಿ. ವಾಸುದೇವನ್ ನಾಯರ್ ಅವರ ಇತ್ತೀಚಿನ ಕಾದಂಬರಿಯ ಅನುವಾದ, ಕೃತಿಯಲ್ಲಿ ಈ ಲೋಕದ ಜನರ ಬದುಕಿನ ವಿವರಗಳು ದಟ್ಟವಾಗಿ ಮೂಡಿಬಂದಂತೆಯೇ ಹಿಂದೂ ಧಾರ್ಮಿಕ ನಂಬುಗೆಗಳಲ್ಲೊಂದಾದ ಸಾವಿನಾಚೆಯ ಆತ್ಮದ ಅಸ್ತಿತ್ವ, ಆ ಬಗ್ಗೆ ಪುಣ್ಯಕ್ಷೇತ್ರಗಳಲ್ಲಿ ನಡೆಯುವ ಸಂಸ್ಕಾರದ ವಿವರಗಳಿಂದ ಪರಸ್ಪರ ವೈರುಧ್ಯದ ಎರಡು ಧ್ರುವಗಳನ್ನು ಚಿತ್ರಿಸಿದ್ದಾರೆ.
ಕನ್ನಡ ಮತ್ತು ಮಲೆಯಾಳಂ ಸಾಹಿತ್ಯದ ಕೊಂಡಿಯಂತೆ ಭಾಷೆಗಳನ್ನು ಬೆಸೆದ ಲೇಖಕ ಕರುಣಾಕರನ್. ಕೇರಳದ ತಲಚೇರಿಯವರು. ಅವರು ಹುಟ್ಟಿದ್ದು ಬೆಳೆದದ್ದು ಕೊಡಗಿನ ವಿರಾಜಪೇಟೆಯಲ್ಲಿ. ತಂದೆ ಕಲ್ಲಿಶಂಕರನ್. ತಾಯಿ- ಶ್ರೀಮತಿ. ಮಡಿಕೇರಿಯ ಸರಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಓದಿದ ನಂತರ ಬಿ.ಎ. ಆನರ್ಸ್ ಓದಲು ಮೈಸೂರಿಗೆ ಬಂದರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ. ಎ. ಪದವೀಧರರು. ಲಕ್ಷ್ಮೀನಾರಾಯಣ ಭಟ್ಟ, ಅ.ರಾ.ಮಿತ್ರ, ಹಂಸನಾಗರಾಜಯ್ಯ, ಕಮಲ ಹಂಪನಾ, ಜಿ. ಪರಶಿವಮೂರ್ತಿ, ಪಾ.ಶ. ಶ್ರೀನಿವಾಸ್ ಮುಂತಾದವರ ಒಡನಾಟದಲ್ಲಿ, ಸಾಹಿತ್ಯ ಚರ್ಚೆಯಲ್ಲೇ ಬೆಳೆದ ಕರುಣಾಕರನ್‌ವರಿಗೆ ಸಾಹಿತ್ಯದ ಗೀಳು ಹಿಡಿದಿದ್ದು ಹೆಚ್ಚೇನಲ್ಲ. ಮಾತೃ ಭಾಷೆ ಮಲೆಯಾಳಂ ಕೂಡಾ ಬರುತ್ತಿದ್ದು, ...
READ MOREಹೊಸತು - ಫೆಬ್ರವರಿ -2005
ಮಲಯಾಳ ಸಾಹಿತ್ಯದಲ್ಲಿ ಜ್ಞಾನಪೀಠ ಪುರಸ್ಕೃತ ಲೇಖಕ ಎಂ. ಟಿ. ವಾಸುದೇವನ್ ನಾಯರ್ ಅವರ ಇತ್ತೀಚಿನ ಕಾದಂಬರಿಯ ಅನುವಾದ, ಕೃತಿಯಲ್ಲಿ ಈ ಲೋಕದ ಜನರ ಬದುಕಿನ ವಿವರಗಳು ದಟ್ಟವಾಗಿ ಮೂಡಿಬಂದಂತೆಯೇ ಹಿಂದೂ ಧಾರ್ಮಿಕ ನಂಬುಗೆಗಳಲ್ಲೊಂದಾದ ಸಾವಿನಾಚೆಯ ಆತ್ಮದ ಅಸ್ತಿತ್ವ, ಆ ಬಗ್ಗೆ ಪುಣ್ಯಕ್ಷೇತ್ರಗಳಲ್ಲಿ ನಡೆಯುವ ಸಂಸ್ಕಾರದ ವಿವರಗಳಿಂದ ಪರಸ್ಪರ ವೈರುಧ್ಯದ ಎರಡು ಧ್ರುವಗಳನ್ನು ಚಿತ್ರಿಸಿದ್ದಾರೆ. ಸಾವಿನವರೆಗಿನ ಮೋಜಿನ ಜೀವನವೇ ಒಂದು ರೀತಿಯಾದರೆ ಅಪರಕ್ರಿಯಾ ಕರ್ಮಕಾಂಡದ ಮೋಕ್ಷ - ಪುನರ್ಜನ್ಮಗಳ ಸುತ್ತ ಕುಣಿಯುತ್ತಿರುವ ಕಾಶಿ- ಗಯಾ-ವಾರಾಣಸಿಯಂತಹ ಸುಲಿಗೆಕೋರ ಕ್ಷೇತ್ರಗಳ ನಿಜಸ್ವರೂಪ ತೋರುವ ಬಗೆಯೇ ಇನ್ನೊಂದು ರೀತಿ, ಒಂದೊಂದು ಕೋನದಿಂದ ಕಂಡಾಗ ಒಂದೊಂದು ರೀತಿಯಲ್ಲಿ ಅನಾವರಣಗೊಳ್ಳುವ ವಾರಾಣಸಿಯ ವೈವಿಧ್ಯಮಯ ನೋಟಗಳಲ್ಲಿ ಆಸ್ತಿಕರ-ನಾಸ್ತಿಕರ ನಡುವಿನ ನಂಬಿಕೆಯ ಘರ್ಷಣೆಯಿದೆ.