ಈ ಕಾದಂಬರಿಯು ಎಲ್ಲರ ಬದುಕಿನಲ್ಲಿ ಒಂದಲ್ಲ,ಒಂದು ಬಗೆಯಲ್ಲಾಗುವ ಅನುಭವಗಳ ಅಕ್ಷರ ರೂಪ.ಲೋಕಾನುಭವವೆಂಬ ಪದವೇನೋ ಒಂದು.ಆದರೆ ನಮಗಾಗುವ ಅನುಭವ ಮಾತ್ರ ಅನೇಕ ಪ್ರಕಾರಗಳಲ್ಲಿನದು . ಅನುಭವದ ಮೂಸೆಯಲ್ಲಿ ಅರಳಿದ ಪ್ರತಿಯೊಂದು ಪಾತ್ರವು ಸ್ವಂತಿಕೆಯಿಂದ ಅರಳಿದರೂ ಸರಪಣಿಯ ನಡುವೆ ಬಂಧಿಯಗೋದು ವಾಸ್ತವ . ಇಲ್ಲಿ ಪಾತ್ರಗಳ ಮೇಲ್ವಿಚಾರಣೆ ಮಾತ್ರ ನನ್ನ ಲೇಖನಿಗೆ ದಕ್ಕಿದೆ . ಸದಾ ಮುಖಾಮುಖಿಯಾಗುವ ಪಾತ್ರಗಳನ್ನು ಹೆಕ್ಕಿ ತೆಗೆದು ಅಕ್ಷರ ರೂಪ ಕೋಡುವ ಪ್ರಯತ್ನ ನನ್ನದಾಗಿದೆ . ಇದರಲ್ಲಿ ನಾನು ಇದ್ದೇನೆ ! ನೀವುಗಳು ಇದ್ದೀರಾ ! ಅದನ್ನು ಪ್ರಾಮಾಣಿಕವಾಗಿ ಗುರುತಿಸಿಕೊಳ್ಳುವುದು ಕಷ್ಟ . ಬದುಕಿನ ದಟ್ಟ ಅನುಭವಗಳ ನಡುವೆ ರೂಪುಗೊಂಡ ಕಾದಂಬರಿ ಇದು ಅನ್ನೋದು ಕಾದಂಬರಿಕಾರ್ತಿಯ ಅಂಬೋಣ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE