ಪಥಗೀತೆ

Pages 344

₹ 250.00




Year of Publication: 2012
Published by: ಸಪ್ತಲಾ ಪ್ರಕಾಶನ
Address: ಪೋಸ್ಟ್ ಬಾಕ್ಸ್ ನಂ . 8513, ಬೆಂಗಳೂರು- 560 085

Synopsys

‘ಪಥಗೀತೆ’ ಪಾಥೇರ್ ಪಾಂಚಲಿ ಬಂಗಾಲಿ ಮೂಲದ ವಿಭೂತಿಭೂಷಣ ವಂದ್ಯೋಪಾಧ್ಯಾಯ ಅವರ ಮೂಲ ಕೃತಿಯಾಗಿದ್ದು, ಜಿ.ಜೆ ಹರಿಜಿತ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸತ್ಯಜಿತ್ ರೇ ನಿರ್ದೆಶನದ ‘ಪಾಥೇರ್ ಪಾಂಚಲಿ’ ಹೆಸರಿನ ಚಲನಚಿತ್ರ ಅ೦ದು ಜಗತ್ತಿನಾದ್ಯಂತ ಪ್ರಸಿದ್ದಿ ಹೊಂದಿತ್ತು. ಇಲ್ಲಿ ವರ್ಣನೆಗೊಂಡ ಜನಜೀವನ ಸುಮಾರು ನೂರು ವರ್ಷಗಳಷ್ಟು ಹಿಂದಿನದು ಇಂದಿನ ಯಾವುದನ್ನೂ ಕಲ್ಪಿಸಿಕೊಳ್ಳ ಲಾರದ ಮುಗ್ಧಕಾಲವದು. ಜೀವನದಲ್ಲಿ ಅತಿಯಾದ ನಿರೀಕ್ಷೆ, ಸ್ಪರ್ಧೆ, ಸಾಧಿಸಲಾಗದ ಛಲಗಳೇನೂ ಇಲ್ಲದ, ಬದುಕನ್ನು ಬಂದಂತೆ ಸ್ವೀಕರಿಸುವ ಪ್ರಕೃತಿಯ ನೆರಳಲ್ಲಿ ತಣ್ಣನೆ ಬಾಳುವ ಸು೦ದರ ಪಾತ್ರ ಚಿತ್ರಣ ಇಲ್ಲಿದೆ. ಸೋಲು ಗೆಲವುಗಳ ಪ್ರಶ್ನೆಗಳಲ್ಲ, ಅಂದಿನ ಬಂಗಾಳದ ಬದುಕಿನ ಅನಾವರಣ ಎಲ್ಲ ವರ್ಗದ ಸಂಸಾರಗಳ ಸ್ಥಿತಿಗಳು, ಮಾನವ ನಿರ್ಮಿತ ಅಂತನ್ನು ಜೊತೆಗೇ ಪುಟ್ಟ ಮಕ್ಕಳಾದ ದುರ್ಗಿ ಹಾಗೂ ಅವೂ ಎಂಬ ಈ ಕಥೆಯ ಜೀವಾಳವಾದ ಮುಗ್ಧ ಸಂವೇದನಾಶೀಲ ಪಾತ್ರಗಳು ಬಹುಕಾಲದವರೆಗೂ ಕಾಡುವಂಥವು. ಇಂಥ ಮಕ್ಕಳನ್ನು ಹೀಗೆಯೇ ಇರಗೊಡುವ ಸಂಸ್ಕೃತಿ ನಮ್ಮದು. ಹಿಂದೆಯೇ ಈ ಕಾದಂಬರಿಯ ಕನ್ನಡ ಅನುವಾದವೊಂದು ನೇರವಾಗಿ ಬಂಗಾಳಿ, ಯಿಂದ ಮಾಡಲ್ಪಟ್ಟಿತ್ತು. ಈಗ ಹಿಂದಿಯಿಂದ ಮರು ಭಾಷಾಂತರ ಹೊಂದಿದೆ.

Reviews

(ಹೊಸತು, ಏಪ್ರಿಲ್ 2012, ಪುಸ್ತಕದ ಪರಿಚಯ)

ಬಂಗಾಲಿ ಕಾದಂಬರಿ ಪಥೇರ್ ಪಾಂಚಾಲಿಯ ಹಿಂದಿ ಅನುವಾದವನ್ನೋದಿ ೫ ವರ್ಷಗಳ ಹಿಂದೆ ಅದನ್ನು ಕನ್ನಡಕ್ಕೆ ಅನುವಾದಿಸಿದವರು ಜಿ. ಜೆ. ಪರಿಜಿತ್, ಆದರೆ ಪ್ರಕಟಣೆಗೆ ಆಡ್ಡಿಯಾದದ್ದು ಕಾಪಿರೈಟ್ ! ಅಷ್ಟೊಂದು ದೀರ್ಘಕಾಲ ಹಸ್ತಪ್ರತಿಯನ್ನು ಜೋಪಾನ ವಾಗಿಟ್ಟು ಪ್ರಕಟಿಸಬೇಕೆ೦ಬ ಉತ್ಕಟೇಚ್ಛೆಯಿರಬೇಕೆ೦ದರೆ, ಅದು ಕಾದಂಬರಿಯ ಮಹತ್ವವನ್ನು ತಿಳಿಸುತ್ತದೆ. ಈ ಕೃತಿ, ಸತ್ಯಜಿತ್ ರೇ ನಿರ್ದೆಶನದ ಇದೇ ಹೆಸರಿನ ಚಲನಚಿತ್ರ ಅ೦ದು ಜಗತ್ತಿನಾದ್ಯಂತ ಪ್ರಸಿದ್ದಿ ಹೊಂದಿತ್ತು. ಇಲ್ಲಿ ವರ್ಣನೆಗೊಂಡ ಜನಜೀವನ ಸುಮಾರು ನೂರು ವರ್ಷಗಳಷ್ಟು ಹಿಂದಿನದು ಇಂದಿನ ಯಾವುದನ್ನೂ ಕಲ್ಪಿಸಿಕೊಳ್ಳ ಲಾರದ ಮುಗ್ಧಕಾಲವದು. ಜೀವನದಲ್ಲಿ ಅತಿಯಾದ ನಿರೀಕ್ಷೆ, ಸ್ಪರ್ಧೆ, ಸಾಧಿಸಲಾಗದ ಛಲ ಗಳೇನೂ ಇಲ್ಲದ, ಬದುಕನ್ನು ಬಂದಂತೆ ಸ್ವೀಕರಿಸುವ ಪ್ರಕೃತಿಯ ನೆರಳಲ್ಲಿ ತಣ್ಣನೆ ಬಾಳುವ ಸು೦ದರ ಪಾತ್ರ ಚಿತ್ರಣ ಇಲ್ಲಿ ಸೋಲು ಗೆಲವುಗಳ ಪ್ರಶ್ನೆಗಳಲ್ಲ, ಅಂದಿನ ಬಂಗಾಳದ ಬದುಕಿನ ಅನಾವರಣ ಎಲ್ಲ ವರ್ಗದ ಸಂಸಾರಗಳ ಸ್ಥಿತಿಗಳು, ಮಾನವ ನಿರ್ಮಿತ ಅಂತನ್ನು ಜೊತೆಗೇ ಪುಟ್ಟ ಮಕ್ಕಳಾದ ದುರ್ಗಿ ಹಾಗೂ ಅವೂ ಎಂಬ ಈ ಕಥೆಯ ಜೀವಾಳವಾದ ಮುಗ್ಧ ಸಂವೇದನಾಶೀಲ ಪಾತ್ರಗಳು ಬಹುಕಾಲದವರೆಗೂ ಕಾಡುವಂಥವು. ಇಂಥ ಮಕ್ಕಳನ್ನು ಹೀಗೆಯೇ ಇರಗೊಡುವ ಸಂಸ್ಕೃತಿ ನಮ್ಮದು. ಹಿಂದೆಯೇ ಈ ಕಾದಂಬರಿಯ ಕನ್ನಡ ಅನುವಾದವೊಂದು ನೇರವಾಗಿ ಬಂಗಾಳಿ, ಯಿಂದ ಮಾಡಲ್ಪಟ್ಟಿತ್ತು. ಈಗ ಹಿಂದಿಯಿಂದ ಮರು ಭಾಷಾಂತರ ಹೊಂದಿದೆ. ಎರದನ್ನೂ ತುಲನೆ ಮಾಡಿ ನೋಡುವ ಅಗತ್ಯವಿಲ್ಲವಾದರೂ ಸಹಜವಾಗಿಯೇ ಓದುಗರು ಹಿಂದಿನ ಅನುವಾದವನ್ನು ಹೆಚ್ಚು ಆಪ್ತವಾಗಿ ಕಾಣುವ ಸಂಭವವೇ ಹೆಚ್ಚು.

 

Related Books