’ನೆರಳಿನ ರೇಖೆಗಳು’ ಅಮಿತಾವ್ ಘೋಷ್ ಅವರ ಪ್ರಸಿದ್ದ ಕೃತಿ ’ದ ಶ್ಯಾಡೋ ಲೈನ್ಸ್’ ನ ಕನ್ನಡ ಅನುವಾದ. ತರುಣನಾದ ನಿರೂಪಕ, ಅವನ ಸುತ್ತಲಿನವರ ಕಥೆಗಳ ಮೂಲಕ, ಭೌತಿಕ, ರಾಜಕೀಯ ಹಾಗೂ ಕಾಲಾನುಕ್ರಮದ ಜೋಡಣೆಯ ಗಡಿಗಳಲ್ಲಿ, ಕಾಲದ ಮುಖಾಂತರ ಪ್ರಯಾಣಿಸುತ್ತಾನೆ. ಆದರೆ ಅವನು ದೊಡ್ಡವನಾಗುತ್ತಿದ್ದಂತೆ ಅರ್ಧ ನೆನಪಿನಲ್ಲಿದ್ದು, ಹಾಗೂ ಕಾಲ್ಪನಿಕವಾಗಿದ್ದ ಚೂರುಪಾರು ಕಥೆಗಳು ಅವನ ಮನಸ್ಸಿಗೆ ಬರುತ್ತವೆ. ಸಂಕೀರ್ಣವಾದ ಅಂತರ್ ಸಂಪರ್ಕಗೊಂಡ ಜಗತ್ತಿನ ಚಿತ್ರ ಕಟ್ಟಲು ಪ್ರಯತ್ನಿಸುತ್ತಾನೆ. ಅದರಲ್ಲಿ ಸರಹದ್ದು ಅಥವಾ ಗಡಿರೇಖೆಗಳಿಗೆ ಅರ್ಥವಿರುವುದಿಲ್ಲ. ಜನಗಳು ಹಾಗೂ ರಾಷ್ಟ್ರಗಳನ್ನು ವಿಭಜಿಸಲು ಎಳೆಯುವ 'ನೆರಳಿನ ರೇಖೆಗಳು ಮಾತ್ರ ನೆನಪುಗಳು, ಸಂಬಂಧಗಳು ಹಾಗೂ ರೂಪಕಗಳ ಸಂಕೀರ್ಣ ಜಾಲದಿಂದಾಚೆಗೆ, ಅಮಿತಾವ್ ಘೋಷ್ ತೀವ್ರವಾದ ಲವಲವಿಕೆಯುಳ್ಳ ಪ್ರಭಾವಶಾಲಿ ಕಥೆಯೊಂದನ್ನು ಹೆಣೆದಿದ್ದಾರೆ. ರಾಷ್ಟ್ರ ಎಂಬ ವಿಚಾರವೇ ಭ್ರಮೆ ಎಂಬುದನ್ನು ಹೊರಗೆಡವುತ್ತಾ, ನಿಮ್ಮ ಮನೆಯೇ ಹಠಾತ್ತನೆ ನಿಮ್ಮ ಶತ್ರುವಾಗಬಲ್ಲ ಅಸಂಗತ ರೀತಿಯನ್ನು ಇಲ್ಲಿ ಚಿತ್ರಿಸಲಾಗಿದೆ. ಎಂ. ಎಸ್. ರಘುನಾಥ್ ಇದನ್ನು ಕನ್ನಡಕ್ಕೆ ತಂದಿದ್ದಾರೆ.
©2024 Book Brahma Private Limited.